ಆಧಾರ್ ಕಾರ್ಡ್ ಇಲ್ಲ ಎಂಬ ಕಾರಣಕ್ಕಾಗಿ ಬಡವರು ಸರ್ಕಾರದ ಹಲವು ಯೋಜನೆಗಳಿಂದ ವಂಚಿತ ರಾಗುತ್ತಿರುವುದರಿಂದ ಆಧಾರ್ ಕಾರ್ಡ್ ಯೋಜನೆಯನ್ನು ರದ್ದುಗೊಳಿಸಬೇಕೆಂದು ‘ಆಹಾರದ ಹಕ್ಕಿಗಾಗಿ ಆಂದೋಲನ, ಕರ್ನಾಟಕ’ ಒತ್ತಾಯಿಸಿದೆ.
ಬೆಂಗಳೂರು: ಆಧಾರ್ ಕಾರ್ಡ್ ಇಲ್ಲ ಎಂಬ ಕಾರಣಕ್ಕಾಗಿ ಬಡವರು ಸರ್ಕಾರದ ಹಲವು ಯೋಜನೆಗಳಿಂದ ವಂಚಿತ ರಾಗುತ್ತಿರುವುದರಿಂದ ಆಧಾರ್ ಕಾರ್ಡ್ ಯೋಜನೆಯನ್ನು ರದ್ದುಗೊಳಿಸಬೇಕೆಂದು ‘ಆಹಾರದ ಹಕ್ಕಿಗಾಗಿ ಆಂದೋಲನ, ಕರ್ನಾಟಕ’ ಒತ್ತಾಯಿಸಿದೆ.
ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಸಂಸ್ಥೆಯ ನಂದಿನಿ ದೇಶದಲ್ಲಿ ಆಧಾರ್ ಇಲ್ಲದೆ ಬದುಕು ಅಸಾಧ್ಯವೆಂಬ ವಾತಾವರಣ ನಿರ್ಮಿಸಲಾಗಿದೆ. ಆಧಾರ್ ಯೋಜನೆಯಿಂದ ಜನರು ಶೋಷಣೆಗೆ ಒಳಗಾಗುತ್ತಿದ್ದಾರೆ ಎಂದು ಆಪಾದಿಸಿದರು.
ಆಧಾರ್ ಇಲ್ಲದೇ ಪಡಿತರ ಚೀಟಿ ಪಡೆಯಲು ಪರಿತಪಿಸುವ ಘಟನೆಗಳು ಜರುಗುತ್ತಿವೆ. ರಾಜ್ಯದಲ್ಲಿ ಪಡಿತರ ಪಡೆಯಲು ಆಧಾರ್ ಕಡ್ಡಾಯವಲ್ಲ ಎಂದಿರುವ ಸಚಿವರು, ಬಾರ್ ಕೋಡ್ ವ್ಯವಸ್ಥೆ ಜಾರಿ ಮಾಡುವುದಾಗಿ ತಿಳಿಸಿದ್ದಾರೆ. ಬಡವರಿಗೆ ಅತ್ಯವಶ್ಯಕವಾದ ಆಹಾರ ಧಾನ್ಯವನ್ನು ನೀಡಲು ತಂತ್ರಜ್ಞಾನದ ಬಳಕೆಯ ಅಗತ್ಯವಾದರೂ ಏನು ಎಂದು ಪ್ರಶ್ನಿಸಿದರು.
ವಿವಿಧ ಆಯೋಗಗಳಿಗೆ ಆಧಾರ್‌ನಿಂದ ಆಗುತ್ತಿರುವ ಜನರ ಹಕ್ಕುಗಳ ಉಲ್ಲಂಘನೆ ಬಗ್ಗೆ ದೂರು ದಾಖಲಿಸಲಾಗಿದೆ ಎಂದು ತಿಳಿಸಿದರು.
ಸ್ವರಾಜ್ ಸಂಘಟನೆಯ ನೀಲಯ್ಯ, ಅನಸೂಯ, ಆಂದೋಲನ ರೇಷ್ಮ, ಝಾನ್ಸಿ, ಚಂದ್ರಿಕಾ, ಸುಕನ್ಯಾ ಇನ್ನಿತರರು ಇದ್ದರು.
