ಸರಕು ಮತ್ತು ಸೇವಾ ತೆರಿಗೆ ಜಾರಿಯಾದ ಬಳಿಕ ಕಪ್ಪುಹಣ ಸಂಗ್ರಹಕ್ಕೆ ಕಡಿವಾಣ ಬೀಳಲಿದೆ ಎಂದು ವಿತ್ತ ಸಚಿವ ಅರುಣ್ ಜೇಟ್ಲಿ ಹೇಳಿದ್ದಾರೆ.

ನವದೆಹಲಿ (ಫೆ.03): ಸರಕು ಮತ್ತು ಸೇವಾ ತೆರಿಗೆ ಜಾರಿಯಾದ ಬಳಿಕ ಕಪ್ಪುಹಣ ಸಂಗ್ರಹಕ್ಕೆ ಕಡಿವಾಣ ಬೀಳಲಿದೆ ಎಂದು ವಿತ್ತ ಸಚಿವ ಅರುಣ್ ಜೇಟ್ಲಿ ಹೇಳಿದ್ದಾರೆ.

ಜಿಎಸ್ ಟಿ ಕರಡು ಮಸೂದೆಯನ್ನು ಈ ಬಾರಿ ಬಜೆಟ್ ನಲ್ಲಿ ಪರಿಚಯಿಸಲಾಗಿದೆ. ಅವುಗಳನ್ನು ಅಂತಿಮಗೊಳಿಸಿ ಸಂಸತ್ತಿನ ಎರಡನೇ ಅಧಿವೇಶನದಲ್ಲಿ ತರುವುದು ನನ್ನ ಉದ್ದೇಶ. ಜಿಎಸ್ ಟಿ ಜಾರಿಯಾಗುವುದರಿಂದ ಕಪ್ಪುಹಣ ಸಂಗ್ರಹಕ್ಕೆ ಕಡಿವಾಣ ಬೀಳಲಿದೆ ಎಂದು ಅರುಣ್ ಜೇಟ್ಲಿ ಆಶಯ ವ್ಯಕ್ತಪಡಿಸಿದರು.

ಈ ಬಾರಿಯ ಬಜೆಟ್ ದೇಶದ ಆರ್ಥಿಕತೆಯಲ್ಲಿ ಸುಧಾರಣೆ ತರಲಿದೆ ಜೊತೆಗೆ ಕೆಲವು ಪ್ರಮುಖ ಬದಲಾವಣೆ ತರಲಿದೆ ಎಂದಿದ್ದಾರೆ.

ರೈಲ್ವೇ ಹಾಗೂ ಕೇಂದ್ರ ಬಜೆಟನ್ನು ವಿಲೀನಗೊಳಿಸಿರುವುದು ಒಂದು ಸದುದ್ದೇಶಕ್ಕಾಗಿ. ಕೇಂದ್ರ ಬಜೆಟ್ ಗೆ ಹೋಲಿಸಿದರೆ ರೈಲ್ವೇ ಬಜೆಟ್ ಪ್ರಮಾಣ ದೊಡ್ಡದು. ರೈಲ್ವೇ ಅಭಿವೃದ್ಧಿ ದೇಶದ ಆರ್ಥಿಕ ಪ್ರಗತಿಯಲ್ಲಿ ಬಹುಮುಖ್ಯ ಪಾತ್ರ ವಹಿಸುತ್ತದೆ ಎಂದಿದ್ದಾರೆ.