ಭೂಮಿಯ ಪರಿಭ್ರಮಣೆಯಲ್ಲಿ ಅಲ್ಪ ಪ್ರಮಾಣದಲ್ಲಿ ವ್ಯತ್ಯಯ ಉಂಟಾಗುವುದರಿಂದ 2018ರಲ್ಲಿ ವಿಶ್ವದಾದ್ಯಂತ ಭೂಕಂಪನಗಳು ಹೆಚ್ಚಿನ ಪ್ರಮಾಣದಲ್ಲಿ ಸಂಭವಿಸಲಿವೆ ಎಂದು ವಿಜ್ಞಾನಿಗಳು ಎಚ್ಚರಿಕೆ ನೀಡಿದ್ದಾರೆ

ಹೊಸದಿಲ್ಲಿ(ನ.20): ಭೂಮಿಯ ಪರಿಭ್ರಮಣೆಯಲ್ಲಿ ಅಲ್ಪ ಪ್ರಮಾಣದಲ್ಲಿ ವ್ಯತ್ಯಯ ಉಂಟಾಗುವುದರಿಂದ 2018ರಲ್ಲಿ ವಿಶ್ವದಾದ್ಯಂತ ಭೂಕಂಪನಗಳು ಹೆಚ್ಚಿನ ಪ್ರಮಾಣದಲ್ಲಿ ಸಂಭವಿಸಲಿವೆ ಎಂದು ವಿಜ್ಞಾನಿಗಳು ಎಚ್ಚರಿಕೆ ನೀಡಿದ್ದಾರೆ. ಅವುಗಳ ತೀವ್ರತೆಯೂ ಕೂಡ ಅಧಿಕವಾಗಿರುತವುದರಿಂದ ಸಾವು ನೋವುಗಳು ಹೆಚ್ಚಾಗಲಿವೆ ಎಂದು ಹೇಳಿದ್ದಾರೆ. ಭೂಮಿಯೊಳಗಿನ ಅಂತರ್ಗತ ಶಕ್ತಿಯ ಬಿಡುಗಡೆಯಿಂದ ಭೂಮಿಯ ಪರಿಭ್ರಮಣೆ ಅವಧಿಯಲ್ಲಿ ಮಿಲಿ ಸೆಕೆಂಡ್'ನಷ್ಟು ಬದಲಾವಣೆ ಕಂಡು ಬರಲಿದೆ ಎಂದು ವಿಜ್ಞಾನಿಗಳ ತಂಡವು ತಿಳಿಸಿದೆ.

ಅಮೆರಿಕಾದ ಭೂ ವಿಜ್ಞಾನಿಗಳ ವಾರ್ಷಿಕ ಸಭೆಯಲ್ಲಿ ರೋಜರ್ ಬಿಲ್ಹಾಮ್ ಎಂಬ ವಿಜ್ಞಾನಿ ತಮ್ಮ ಉಪನ್ಯಾಸದ ವೇಳೆ ಈ ವಿಚಾರವನ್ನು ತಿಳಿಸಿದ್ದಾರೆ. ಭೂಮಿ ಪರಿಭ್ರಮಣೆ ಮತ್ತು ಭೂ ಕಂಪದ ನಡುವೆ ಬಲವಾದಂತಹ ಸಂಬಂಧವಿರುತ್ತದೆ. ಇದರಿಂದ 2018ರಲ್ಲಿ ಹೆಚ್ಚು ಭೂಕಂಪನಗಳಾಗಲಿವೆ ಎಂದರು.

1900ರಿಂದ ಇತ್ತೀಚೆಗೆ ಸಂಭವಿಸಿದ ಭೂ ಕಂಪನಗಳ ಬಗ್ಗೆ ಅಧ್ಯಯನ ನಡೆಸಿದ ಇಬ್ಬರು ವಿಜ್ಞಾನಿಗಳ ತಂಡವು ಭೂಮಿಯ ಪರಿಭ್ರಮಣೆಯ ಅವಧಿ ಕಡಿಮೆಯಾದಾಗಲೇ ಭೂಕಂಪನಗಳ ಸಂಖ್ಯೆಯೂ ಹೆಚ್ಚಾಗಿರುವ ಬಗ್ಗೆ ತಿಳಿದುಬಂದಿದ್ದಾಗಿಯೂ ಕೂಡ ತಿಳಿಸಿದ್ದಾರೆ. ಅಟೊಮಿಕ್ ಕ್ಲಾಕ್ ಮೂಲಕ ಸಮಯದ ವ್ಯತ್ಯಯವನ್ನು ಅಳತೆ ಮಾಡಲಾಗುತ್ತದೆ ಎಂದು ವಿಜ್ಞಾನಿಗಳ ತಂಡ ತಿಳಿಸಿದೆ.