ನವದೆಹಲಿ(ಸೆ. 24): ಜಮ್ಮು- ಕಾಶ್ಮೀರದಲ್ಲಿ ಭಯೋತ್ಪಾದನೆಯಿಂದಾಗಿ ಸ್ಥಗಿತಗೊಂಡಿದ್ದ ಸಾವಿರಾರು ಶಾಲೆಗಳು ಮತ್ತು ದೇವಾಲಯ ಮರು ಆರಂಭಿಸಲಾಗುವುದು ಎಂದು ಗೃಹ ಖಾತೆ ರಾಜ್ಯ ಸಚಿವ ಜಿ.ಕಿಶನ್ ರೆಡ್ಡಿ ಸೋಮವಾರ ಹೇಳಿದ್ದಾರೆ.

ಕಣಿವೆ ರಾಜ್ಯದಲ್ಲಿ ಭಯೋತ್ಪದಕರ ವಿಧ್ವಂಸಕ ಕೃತ್ಯಗಳಿಂದಾಗಿ ಶಾಲೆಗಳು ಮುಚ್ಚಲ್ಪಟ್ಟಿದ್ದವು. ದೇಗುಲಗಳೂ ಕಾರ್ಯಸ್ಥಗಿತಗೊಳಿಸಿದ್ದವು. ಇದೀಗ ಇವೆಲ್ಲವನ್ನೂ ಪುನರ್ ನಿರ್ಮಾಣ ಮಾಡಲು ಕೇಂದ್ರ ಸರ್ಕಾರ ತೀರ್ಮಾನ ಮಾಡಿದೆ.

ಸೆ.26, 27 ಕ್ಕೆ ಬ್ಯಾಂಕ್ ನೌಕರರ ಮುಷ್ಕರವಿಲ್ಲ

ಉಗ್ರರ ದಾಳಿಯಿಂದಾಗಿ 50,000 ದೇವಾಲಯ ಹಾಗೂ ಶಾಲಾ ಕಟ್ಟಡ ಗಳು ನಾಶಗೊಂಡಿವೆ ಅಥವಾ ಮುಚ್ಚಲ್ಪಟ್ಟಿವೆ. ಹೀಗಾಗಿ ಜಮ್ಮು- ಕಾಶ್ಮೀರದಲ್ಲಿ ಎಲ್ಲಾ ದೇವಾಲಯಗಳ ಮತ್ತು ಶಾಲೆಗಳ ಸಮೀಕ್ಷೆ ನಡೆಸಲು ಕೇಂದ್ರ ನಿರ್ಧರಿಸಿದೆ. ಕಾಶ್ಮೀರ ಕಣಿವೆಯಲ್ಲಿ ಚಿತ್ರಮಂದಿರಗಳು ಕಳೆದ 20 ವರ್ಷಗಳಿಂದ ಮುಚ್ಚಲ್ಪಟ್ಟಿವೆ. ಅವುಗಳನ್ನು ಪುನಃ ಆರಂಭಿಸಲು ನಾವು ಚಿಂತನೆ ನಡೆಸಿದ್ದೇವೆ ಎಂದು ತಿಳಿಸಿದ್ದಾರೆ.

ಶಬರಿಮಲೆ ಅಯ್ಯಪ್ಪ ಸನ್ನಿಧಿ ಪ್ರಸಾದಕ್ಕಿನ್ನು ಪೇಟೆಂಟ್‌!