ಇವ ಅಂತಿಂಥ ಪ್ರಾಚಾರ್ಯ ಅಲ್ಲ. ಶಾಲೆಗೆ ಬರುತ್ತಿದ್ದ ವಿದ್ಯಾರ್ಥಿಗೆ ನೀಲಿ ಚಿತ್ರ ತೋರಿಸುತ್ತಿದ್ದ ಕಳ್ಳ ಗುರು.   ಕಳ್ಳ ಗುರುವಿಗೆ ಕೌನ್ಸಿಲರ್ ಎಂಬ ಚಾಂಡಾಲ ಶಿಷ್ಯನ ಸಾಥ್.

ಪುಣೆ[ಸೆ.16] 14 ವರ್ಷದ ವಿದ್ಯಾರ್ಥಿಗೆ ನೀಲಿಚಿತ್ರ ತೋರಿಸಿದ ಆರೋಪದ ಮೇಲೆ ಅನುದಾನಿತ ಇಂಗ್ಲೀಷ್ ಮಾಧ್ಯಮ ಶಾಲೆಯ ಪ್ರಾಚಾರ್ಯರೊಬ್ಬರ ಮೇಲೆ ದೂರು ದಾಖಲಾಗಿದೆ.

ಕಳೆದ ಮಾರ್ಚ್‌ನಲ್ಲಿಯೇ ನಡೆದ ಪ್ರಕರಣ ಇದೀಗ ತಡವಾಗಿ ಬೆಳಕಿಗೆ ಬಂದಿದೆ. ಸಿಬ್ಬಂದಿ ಕೊಠಡಿ ಮತ್ತು ಪ್ರಿನ್ಸಿಪಾಲ್ ಚೇಂಬರ್‌ಗೆ ಬಾಲಕನನ್ನು ಕರೆದೊಯ್ದ ಪ್ರಿನ್ಸಿಪಾಲ್, ಬಾಲಕನಿಗೆ ನೀಲಿಚಿತ್ರ ತೋರಿಸಿ ಅಸಭ್ಯವಾಗಿ ವರ್ತಿಸಿದ್ದಾನೆ ಎಂಬ ಆರೋಪದ ಮೇಲೆ ದೂರು ದಾಖಲಾಗಿದೆ.

ಹೊರಗೆ ಬಾಯಿ ಬಿಡದಂತೆ ಬಾಲಕನಿಗೆ ಶಾಲಾ ಆಡಳಿತ ಬೆದರಿಕೆ ಹಾಕಿತ್ತು. ಇದಾದ ಮೇಲೆ ಶಾಲೆಗೆ ತೆರಳಲು ಬಾಲಕ ನಿರಾಕರಿಸುತ್ತಿದ್ದ. ಪೋಷಕರು ಪ್ರಶ್ನೆ ಮಾಡಿದಾಗ ಬಾಲಕ ನಡೆದ ಸಂಗತಿ ತಿಳಿಸಿದ್ದಾನೆ.

ಅದು ಹೇಗೋ ಮಾಹಿತಿ ಪಡೆದುಕೊಂಡಿರುವ ಪ್ರಾಚಾರ್ಯ ಕಳೆದ ಎರಡು ವಾರದಿಂದ ಶಾಲೆಗೆ ಬಂದಿಲ್ಲ. ತಲೆ ಮರೆಸಿಕೊಂಡಿರುವ ವಿಕೃತನ ಬಂಧನಕ್ಕೆ ಬಲೆ ಬೀಸಲಾಗಿದೆ.