ಈ ಶಾಲೆ ಸ್ವಾತಂತ್ರ ಪೂರ್ವದಲ್ಲಿಯೇ ಆರಂಭವಾಗಿದೆ. ಹಳೆ ಕಟ್ಟಡವಾಗಿದ್ರಂದ ಕಟ್ಟಡದ ಮೇಲ್ಛಾವಣಿ ಕಳಚಿ ಕೆಲವು ಬಾರೀ ಮಕ್ಕಳ ಮೇಲೆ ಬಿದ್ದಿದೆ.
ಇಲ್ಲಿ ಮಕ್ಕಳು ಅನುಭವಿಸೋ ನರಕ ಕಂಡ್ರೆ, ಸರಕಾರ ಖರ್ಚು ಮಾಡ್ತೀರೋ ಕೋಟ್ಯಾಂತರ ಹಣ ಎಲ್ಲಿ ಹೋಗ್ತಿದೆ ಅನ್ನೋದೇ ದೊಡ್ಡ ಪ್ರಶ್ನೆ. ಕೋಲಾರ ಜಿಲ್ಲೆಯ ಬಂಗಾರಪೇಟೆ ತಾಲೂಕಿನ ಬೇತಮಂಗಳದಲ್ಲಿ ಇತಿಹಾಸವನ್ನು ಹೊಂದಿರುವ ಸರ್ಕಾರಿ ಶಾಲೆ ಇದು. ಈ ಶಾಲೆ ಸ್ವಾತಂತ್ರ ಪೂರ್ವದಲ್ಲಿಯೇ ಆರಂಭವಾಗಿದೆ. ಹಳೆ ಕಟ್ಟಡವಾಗಿದ್ರಂದ ಕಟ್ಟಡದ ಮೇಲ್ಛಾವಣಿ ಕಳಚಿ ಕೆಲವು ಬಾರೀ ಮಕ್ಕಳ ಮೇಲೆ ಬಿದ್ದಿದೆ.
ಇನ್ನೂ ಗೆದ್ದಿಲು ಹಿಡಿದ ಕಿಟಕಿ - ಬಾಗಿಲುಗಳಿವೆ. ಗೋಡೆಗಳಂತು ಬಿರುಕು ಬಿಟ್ಟಿವೆ. ಆಗಲೋ ಈಗಲೋ ಬವೀಳೋ ಹಂತದಲ್ಲಿವೆ. ಆದರೂ ಇದೇ ಕಟ್ಟಡದ ಕೆಳಗೆ ಕುಳಿತು ಮಕ್ಕಳು ಪಾಠ ಕಲಿಯಬೇಕಿದೆ. ಮಾನ್ಯ ಶಿಕ್ಷಣ ಸಚಿವರೇ ಈ ಮಕ್ಕಳ ಜೊತೆ ಯಾಕೆ ಸರ್ಕಾರ ಚಲ್ಲಾಟ ಆಡುತ್ತಿದೆ. ನಿಮ್ಮ ಅಧಿಕಾರಿಗಳಿಗೆ ಯಾಕಿಷ್ಟು ನಿರ್ಲಕ್ಷ್ಯ ಅನ್ನೋದು ಪೋಷಕರ ಪ್ರಶ್ನೆ.
