ಶಾಲಾ ಮಕ್ಕಳಿಗೆ ಹೋಂವರ್ಕ್ ಕೊಡುವುದು ಹೊಸದೇನಲ್ಲ. ಆದರೆ ಬ್ರಿಟನ್‌ನ ಶಾಲೆಯೊಂದರಲ್ಲಿ ಮಕ್ಕಳಿಗೆ ಆತ್ಮಹತ್ಯೆಯ ಕುರಿತು ಪತ್ರ ಬರೆದುಕೊಂಡು ಬರುವಂತೆ ಹೋಂವರ್ಕ್ ನೀಡಿರುವ ಆಘಾತಕಾರಿ ವಿಷಯ ಬೆಳಕಿಗೆ ಬಂದಿದೆ. ಈ ಬಗ್ಗೆ ಪೋಷಕರು ತೀವ್ರ ಆಕ್ರೋಶ ವ್ಯಕ್ತಪಡಿಸುತ್ತಲೇ, ಶಾಲೆಯ ಪ್ರಿನ್ಸಿಪಾಲ್‌ ಪೋಷಕರ ಕ್ಷಮೆ ಕೇಳಿ ವಿವಾದಕ್ಕೆ ತೆರೆ ಎಳೆಯುವ ಯತ್ನ ಮಾಡಿದ್ದಾರೆ.

ಲಂಡನ್‌(ಜೂ.26): ಶಾಲಾ ಮಕ್ಕಳಿಗೆ ಹೋಂವರ್ಕ್ ಕೊಡುವುದು ಹೊಸದೇನಲ್ಲ. ಆದರೆ ಬ್ರಿಟನ್‌ನ ಶಾಲೆಯೊಂದರಲ್ಲಿ ಮಕ್ಕಳಿಗೆ ಆತ್ಮಹತ್ಯೆಯ ಕುರಿತು ಪತ್ರ ಬರೆದುಕೊಂಡು ಬರುವಂತೆ ಹೋಂವರ್ಕ್ ನೀಡಿರುವ ಆಘಾತಕಾರಿ ವಿಷಯ ಬೆಳಕಿಗೆ ಬಂದಿದೆ. ಈ ಬಗ್ಗೆ ಪೋಷಕರು ತೀವ್ರ ಆಕ್ರೋಶ ವ್ಯಕ್ತಪಡಿಸುತ್ತಲೇ, ಶಾಲೆಯ ಪ್ರಿನ್ಸಿಪಾಲ್‌ ಪೋಷಕರ ಕ್ಷಮೆ ಕೇಳಿ ವಿವಾದಕ್ಕೆ ತೆರೆ ಎಳೆಯುವ ಯತ್ನ ಮಾಡಿದ್ದಾರೆ.

 ಇಂಥದ್ದೊಂದು ಘಟನೆ ನಡೆದಿರುವುದು ಲಂಡನ್‌ನ ಕಿಡ್‌ಬ್ರೂಕ್‌ ಜಿಲ್ಲೆಯ ಥಾಮಸ್‌ ಟ್ಯಾಲ್ಲಿಸ್‌ ಸ್ಕೂಲ್‌ನಲ್ಲಿ. ಕೆಲ ದಿನಗಳ ಹಿಂದೆ ಶಾಲೆಯ ಶಿಕ್ಷಕರು, ನೀವು ಆತ್ಮಹತ್ಯೆ ಮಾಡಿಕೊಳ್ಳುತ್ತಿದ್ದೀರಿ ಎಂದು ಕಲ್ಪಿಸಿಕೊಂಡು ನಿಮ್ಮ ಪ್ರೀತಿಪಾತ್ರರಿಗೆ ಅಂತಿಮ ಪತ್ರವೊಂದನ್ನು ಬರೆಯಿರಿ. ಇದೇ ಇಂದಿನ ಹೋಮ್‌ವರ್ಕ್ ಎಂದು ಹೇಳಿ ಕಳುಹಿಸಿದ್ದರು. ಮಕ್ಕಳು ಈ ವಿಷಯದ ಬಗ್ಗೆ ಮನೆಯಲ್ಲಿ ಪ್ರಸ್ತಾಪಿಸುತ್ತಲೇ, ಪೋಷಕರು ಶಾಲೆಯ ಸಂವೇದನಾರಹಿತ ವರ್ತನೆ ಬಗ್ಗೆ ಕಿಡಿಕಾರಿದ್ದಾರೆ.

ಇನ್ನೂ ಎಳೆಯ ಮಕ್ಕಳಲ್ಲಿ ಆತ್ಮಹತ್ಯೆಯಂಥ ವಿಷಯಗಳನ್ನು ತುಂಬುವ ಅವಶ್ಯಕತೆ ಏನಿತ್ತು ಎಂದು ಪೋಷಕರು ಶಾಲೆಯ ಶಿಕ್ಷಕ ವೃಂದದ ಮೇಲೆ ಗರಂ ಆಗಿದ್ದಾರೆ. ವಿಷಯ ಕಾವೇರುತ್ತಲೇ, ಶಾಲೆಯ ಪ್ರಿನ್ಸಿಪಾಲ್‌ ಕ್ಷಮೆಯಾಚಿಸಿದ್ದಾರೆ.