ಗ್ರಾಮಗಳು ಅಭಿವೃದ್ಧಿಗೆ ಸರ್ಕಾರ ಕೋಟಿ ಕೋಟಿ ಹಣವನ್ನು  ನೇರವಾಗಿ ಗ್ರಾಮ ಪಂಚಾಯಿತಿಗೆ ನೀಡುತ್ತದೆ. ಆದರೆ ಗ್ರಾಮದ ಅಭಿವೃದ್ಧಿ ಮಾತ್ರ ಶೂನ್ಯ. ಬಿಡುಗಡೇ ಆದ ಹಣ ಮಾತ್ರ ಅಧಿಕಾರಿಗಳ ನುಂಗಿ ನೀರು ಕುಡಿಯುತ್ತಿದ್ದಾರೆ. ಇಂಥಹದೊಂದು ಹಗರಣವೊಂದು ಕೋಲಾರ ಜಿಲ್ಲೆಯ ಮುಳಬಾಗಿಲು ತಾಲ್ಲೂಕಿನ ಮುಡಿಯನೂರು ಗ್ರಾಮ ಪಂಚಾಯಿತಿಯಲ್ಲಿ ನಡೆದಿದೆ.

ಕೋಲಾರ: ಗ್ರಾಮಗಳು ಅಭಿವೃದ್ಧಿಗೆ ಸರ್ಕಾರ ಕೋಟಿ ಕೋಟಿ ಹಣವನ್ನು ನೇರವಾಗಿ ಗ್ರಾಮ ಪಂಚಾಯಿತಿಗೆ ನೀಡುತ್ತದೆ. ಆದರೆ ಗ್ರಾಮದ ಅಭಿವೃದ್ಧಿ ಮಾತ್ರ ಶೂನ್ಯ. ಬಿಡುಗಡೇ ಆದ ಹಣ ಮಾತ್ರ ಅಧಿಕಾರಿಗಳ ನುಂಗಿ ನೀರು ಕುಡಿಯುತ್ತಿದ್ದಾರೆ. ಇಂಥಹದೊಂದು ಹಗರಣವೊಂದು ಕೋಲಾರ ಜಿಲ್ಲೆಯ ಮುಳಬಾಗಿಲು ತಾಲ್ಲೂಕಿನ ಮುಡಿಯನೂರು ಗ್ರಾಮ ಪಂಚಾಯಿತಿಯಲ್ಲಿ ನಡೆದಿದೆ.

ಈ ಗ್ರಾಮ ಪಂಚಾಯ್ತಿಯಲ್ಲಿ ಕಾಮಗಾರಿ ನಡೆಯದೇ ಹಣ ಡ್ರಾ ಮಾಡಿ ಗುಳುಂ ಮಾಡಲಾಗಿದೆ. ಸದ್ಯ ಆಡಳಿತದಲ್ಲಿರುವ ಗ್ರಾಮ ಪಂಚಾಯತ್ ಸದಸ್ಯರು, ಅಧ್ಯಕ್ಷರು, ಅಧಿಕಾರಿಗಳು ಕಾಮಗಾರಿಗೆ ವರ್ಷದ ಹಿಂದೆಯೇ ಹಣ ಡ್ರಾ ಮಾಡಿದ್ದಾರೆ.

ಈ ಹಗರಣದಲ್ಲಿ ಗ್ರಾಮ ಪಂಚಾಯಿತಿಯ ಅಧ್ಯಕ್ಷರಾದ ಲಕ್ಷ್ಮೀದೇವಮ್ಮ ಹಾಗೂ ಅಧಿಕಾರಿಗಳು , ಸದಸ್ಯರು ಈ ಹಗರಣದಲ್ಲಿ ಶಾಮೀಲಾಗಿದ್ದಾರೆ.

ಮುಡಿಯನೂರು ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ, ಕೃಷ್ಣ ಗಿರಿ ಗ್ರಾಮದ ಸೊಣ್ಣೆಗೌಡ ಎಂಬುವರ ಮನೆಯಿಂದ ಚರಂಡಿ ಮತ್ತು ರಸ್ತೆ ಕಾಮಗಾರಿಗೆ ರೂ.2.82 ಲಕ್ಷ ಹಾಗೂ ವೇಮನಕುಂಟೆಯಿಂದ ಸರ್ಕಾರಿ ಕೊಳವೆ ಬಾವಿವರೆಗೂ ರಸ್ತೆಗೆ ರೂ. 2. 27 ಲಕ್ಷ ಮತ್ತು ಕೃಷ್ಣಗಿರಿ ಗ್ರಾಮದ ಶ್ರೀನಿವಾಸಪ್ಪ ಮನೆಯಿಂದ ವೇಣುಗೋಪಾಲಪ್ಪ ಮನೆವರೆಗೂ ಚರಂಡಿ ಕೆಲಸಕ್ಕೆ ರೂ.2.86 ಲಕ್ಷ ಹಣವನ್ನು ಡ್ರಾ ಮಾಡಲಾಗಿದೆ. ಆದರೆ ಕೆಲಸ ಮಾತ್ರ ಶೂನ್ಯ.

ಗ್ರಾಮಪಂಚಾಯಿತಿ ಹಾಲಿ ಅಧ್ಯಕ್ಷ ಲಕ್ಷ್ಮೀದೇವಮ್ಮ ಕುರಿ, ದನದ ಹಟ್ಟಿ ನಿರ್ಮಾಣಕ್ಕೆ 34 ಸಾವಿರ ಹಣ ಮಂಜೂರು ಮಾಡಿಸಿಕೊಂಡಿದ್ದಾರೆ. ಆದರೆ,ಹಟ್ಟಿ ನಿರ್ಮಾಣ ಕಾರ್ಯ ಮಾತ್ರ ಆಗಿಲ್ಲ. ಆದರೆ ಪಕ್ಕದ ಗ್ರಾಮದ ಮುನಿಯಪ್ಪ ಎಂಬುವರಿಗೆ ಸೇರಿದ್ದ ಹಟ್ಟಿಯನ್ನು ಕಟ್ಟಿ ವರ್ಷವಾದ್ರೂ ಬಿಲ್ ಮಾತ್ರ ಆಗಿಲ್ಲ.

ಒಟ್ಟಾರೆ, ಭ್ರಷ್ಟರ ಕೂಪವಾಗಿರುವ ಮುಡಿಯನೂರು ಗ್ರಾಮಪಂಚಾಯಿಗೆ ಸೇರಿದ ಮೂವತ್ತಾರು ಗ್ರಾಮಗಳಲ್ಲಿ ಅನೇಕ ಹಗರಣಗಳು ಅಡಗಿ ಕುಳತಿವೆ. ಪ್ರಾಮಾಣಿಕ ತನಿಖೆ ನಡೆಸಿದರೆ ಅನೇಕ ಭ್ರಷ್ಟರ ಬಣ್ಣ ಬಯಲಾಗಿದೆ. ಇನ್ನಾದ್ರೂ ಈ ವರದಿ ಬಳಿಕ ಅಧಿಕಾರಿಗಳು ಎಚ್ಚೆತು ಸೂಕ್ತ ಕ್ರಮ ಕೈಗೊಳ್ತಾರಾ ಎಂದು ಕಾದು ನೋಡಬೇಕು.

ವರದಿ: ಕೋಲಾರದಿಂದ ಡಿ.ಎನ್.ಲಕ್ಷ್ಮೀಪತಿ ಸುವರ್ಣ ನ್ಯೂಸ್