ನವದೆಹಲಿ(ಆ.20): ಸೋಷಿಯಲ್ ಮೀಡಿಯಾ ಪ್ರೊಫೈಲ್‌ಗಳನ್ನು ಆಧಾರ್ ಸಂಖ್ಯೆಯೊಂದಿಗೆ ಲಿಂಕ್ ಮಾಡುವ ಬೇಡಿಕೆಗಳಿಗೆ ಸಂಬಂಧಿಸಿದ ಪ್ರಕರಣಗಳನ್ನು ವರ್ಗಾವಣೆ ಮಾಡುವಂತೆ ಫೇಸ್‌ಬುಕ್ ಇಂಕ್ ಸಲ್ಲಿಸಿದ್ದ ಮನವಿಯನ್ನು ಆಲಿಸಲು ಸುಪ್ರೀಂ ಕೋರ್ಟ್ ಒಪ್ಪಿಗೆ ನೀಡಿದೆ.

ನ್ಯಾಯಮೂರ್ತಿಗಳಾದ ದೀಪಕ್ ಗುಪ್ತಾ ಮತ್ತು ಅನಿರುದ್ಧ ಬೋಸ್ ಅವರನ್ನೊಳಗೊಂಡ ನ್ಯಾಯಪೀಠ, ಕೇಂದ್ರ ಸರ್ಕಾರ, ಗೂಗಲ್, ಟ್ವಿಟರ್, ಯೂಟ್ಯೂಬ್ ಸೇರಿದಂತೆ ಹಲವು ಸಂಸ್ಥೆಗಳಿಗೆ ನೋಟಿಸ್ ನೀಡಿದೆ.

ನಕಲಿ, ಮಾನಹಾನಿಕರ ಮತ್ತು ಅಶ್ಲೀಲ ವಿಷಯಗಳ ಪ್ರಸರಣವನ್ನು ರಾಷ್ಟ್ರ ವಿರೋಧಿ ಮತ್ತು ಭಯೋತ್ಪಾದಕ ಸಂಪರ್ಕಗಳನ್ನು  ಪರಿಶೀಲಿಸಲು ಬಳಕೆದಾರರ ಸಾಮಾಜಿಕ ಮಾಧ್ಯಮ ಪ್ರೊಫೈಲ್‌ಗಳನ್ನು ಆಧಾರ್ ಸಂಖ್ಯೆಗಳೊಂದಿಗೆ ಸಂಪರ್ಕಿಸುವ ಅಗತ್ಯವಿದೆ ಎಂದು ಸುಪ್ರೀಂ ಕೋರ್ಟ್‌ಗೆ ತಮಿಳುನಾಡು ಸರ್ಕಾರ ತಿಳಿಸಿತ್ತು

 12-ಅಂಕಿಯ ಆಧಾರ್ ಸಂಖ್ಯೆ, ಬಯೋಮೆಟ್ರಿಕ್ ವಿಶಿಷ್ಟ ಗುರುತು ಹಂಚಿಕೆಯನ್ನು ಮಾಡುವುದರಿಂದ ಬಳಕೆದಾರರ ಗೌಪ್ಯತೆ ನೀತಿಯನ್ನು ಉಲ್ಲಂಘಿಸಿದಂತಾಗಲಿದೆ ಎಂದು ಫೇಸ್‌ಬುಕ್ ಇಂಕ್ ತಮಿಳುನಾಡಿನ ಸಲಹೆ ಪರಿಶೀಲಿಸುವಂತೆ ಫೇಸ್‌ಬುಕ್ ಇಂಕ್ ಸುಪ್ರೀಂಕೋರ್ಟ್’ಗೆ ಮನವಿ ಮಾಡಿದೆ.