ತನ್ನ ಕಾರಿಗೆ ದಾರಿ ಕೊಡಲಿಲ್ಲ ಎಂಬ ಕಾರಣಕ್ಕೆ ರಾಕಿ ಯಾದವ್, ಆದಿತ್ಯ ಸಚದೇವ ಎಂಬ ವಿದ್ಯಾರ್ಥಿಯನ್ನು ಗುಂಡಿಕ್ಕಿ ಹತ್ಯೆಗೈದಿದ್ದ ಘಟನೆ ಕಳೆದ ಮೇ 7ರಂದು ಬಿಹಾರದ ಗಯಾದಲ್ಲಿ ನಡೆದಿತ್ತು
ನವದೆಹಲಿ (ಅ.28): ಕ್ಷುಲ್ಲಕ ಕಾರಣಕ್ಕೆ ಯುವಕನೋರ್ವನನ್ನು ಹತ್ಯೆ ಮಾಡಿರುವ ಆರೋಪ ಎದುರಿಸುತ್ತಿರುವ ಜೆಡಿಯು ನಾಯಕಿ ಮನೋರಮಾ ದೇವಿ ಪುತ್ರ ರಾಕಿ ಯಾದವ್’ಗೆ ಪಾಟ್ನಾ ಹೈಕೋರ್ಟ್ ನೀಡಿರುವ ಜಾಮೀನಿಗೆ ಸುಪ್ರೀಂ ಕೋರ್ಟ್ ಇಂದು ತಡೆಯಾಜ್ಞೆ ನೀಡಿದೆ.
ತನ್ನ ಕಾರಿಗೆ ದಾರಿ ಕೊಡಲಿಲ್ಲ ಎಂಬ ಕಾರಣಕ್ಕೆ ರಾಕಿ ಯಾದವ್, ಆದಿತ್ಯ ಸಚದೇವ ಎಂಬ ವಿದ್ಯಾರ್ಥಿಯನ್ನು ಗುಂಡಿಕ್ಕಿ ಹತ್ಯೆಗೈದಿದ್ದ ಘಟನೆ ಕಳೆದ ಮೇ 7ರಂದು ಬಿಹಾರದ ಗಯಾದಲ್ಲಿ ನಡೆದಿತ್ತು.
ರಾಕಿ ಯಾದವ್ ಹಾಗೂ ಇನ್ನೋರ್ವ ಸಹಚರನ ವಿರುದ್ಧ ಗಯಾ ಕೋರ್ಟ್’ನಲ್ಲಿ ಆರೋಪಪಟ್ಟಿ ಸಲ್ಲಿಸಲಾಗಿದೆ. ಕಳೆದ ಅಕ್ಟೋಬರ್ 19ರಂದು ಪಾಟ್ನಾ ಹೈಕೋರ್ಟ್ ಆರೋಪಿ ರಾಕಿ ಯಾದವ್’ಗೆ ಜಾಮೀನು ನೀಡಿತ್ತು.
