Asianet Suvarna News Asianet Suvarna News

ಎಸ್‌ಸಿ/ಎಸ್‌ಟಿ ಕಾಯ್ದೆಯಡಿ ದೂರು ಕೊಟ್ಟತಕ್ಷಣ ನೌಕರರ ಬಂಧನ ಇಲ್ಲ

ಸರ್ಕಾರಿ ನೌಕರರ ವಿರುದ್ಧ ಪರಿಶಿಷ್ಟಜಾತಿ ಮತ್ತು ಪರಿಶಿಷ್ಟ ಪಂಗಡಗಳ (ದೌರ್ಜನ್ಯ ತಡೆ) ಕಾಯ್ದೆಯಡಿ ದೂರುಗಳು ದಾಖಲಾದರೆ, ತಕ್ಷಣಕ್ಕೆ ಅಧಿಕಾರಿಗಳ ಬಂಧನ ಮಾಡುವಂತಿಲ್ಲ ಎಂದು ಸುಪ್ರೀಂ ಕೋರ್ಟ್‌ ಸ್ಪಷ್ಟಪಡಿಸಿದೆ.

SC ST Act being Abused prior sanction must for arrest

ನವದೆಹಲಿ: ಸರ್ಕಾರಿ ನೌಕರರ ವಿರುದ್ಧ ಪರಿಶಿಷ್ಟಜಾತಿ ಮತ್ತು ಪರಿಶಿಷ್ಟ ಪಂಗಡಗಳ (ದೌರ್ಜನ್ಯ ತಡೆ) ಕಾಯ್ದೆಯಡಿ ದೂರುಗಳು ದಾಖಲಾದರೆ, ತಕ್ಷಣಕ್ಕೆ ಅಧಿಕಾರಿಗಳ ಬಂಧನ ಮಾಡುವಂತಿಲ್ಲ ಎಂದು ಸುಪ್ರೀಂ ಕೋರ್ಟ್‌ ಸ್ಪಷ್ಟಪಡಿಸಿದೆ.

ಪರಿಶಿಷ್ಟಜಾತಿ ಮತ್ತು ಪಂಗಡಗಳ ಜನರ ಮೇಲೆ ನಡೆಯುವ ದೌರ್ಜನ್ಯಗಳನ್ನು ತಡೆಯುವ ನಿಟ್ಟಿನಲ್ಲಿ ಇರುವ ಈ ಕಠಿಣ ಕಾನೂನನ್ನು ವ್ಯಾಪಕ ದುರ್ಬಳಕೆ ಮಾಡಿಕೊಳ್ಳುತ್ತಿರುವ ಆಪಾದನೆಗಳ ಹಿನ್ನೆಲೆಯಲ್ಲಿ ಕೋರ್ಟ್‌ ಈ ತೀರ್ಪು ನೀಡಿದೆ.

ಎಸ್‌ಸಿ,ಎಸ್‌ಟಿ ಕಾಯ್ದೆಯಡಿ ಸರ್ಕಾರಿ ನೌಕರನ ಬಂಧನಕ್ಕೆ ಮೊದಲು ಪೊಲೀಸ್‌ ಉಪ ವರಿಷ್ಠಾಧಿಕಾರಿ ಮಟ್ಟದ ಅಧಿಕಾರಿಗಳಿಂದ ಪ್ರಾಥಮಿಕ ತನಿಖೆ ನಡೆದಿರಬೇಕು ಎಂದು ನ್ಯಾ. ಆದರ್ಶ ಗೋಯಲ್‌ ಮತ್ತು ನ್ಯಾ. ಯು.ಯು. ಲಲಿತ್‌ ನ್ಯಾಯಪೀಠ ತಿಳಿಸಿದೆ.

ಕಾಯ್ದೆಯಡಿ ಸರ್ಕಾರಿ ನೌಕರನ ಬಂಧನಕ್ಕೂ ಮೊದಲು ಸಂಬಂಧಪಟ್ಟಪ್ರಾಧಿಕಾರದಿಂದ ಪೂರ್ವಾನುಮತಿ ಪಡೆದಿರಬೇಕು ಎಂದು ತಿಳಿಸಿರುವ ಕೋರ್ಟ್‌, ಇಂತಹ ಪ್ರಕರಣಗಳಿಗೆ ಸಂಬಂಧಿಸಿ ಹಲವು ನಿರ್ದೇಶನಗಳನ್ನು ನೀಡಿದೆ. ಈ ಕಾನೂನಿನ ಕಠಿಣ ನಿಯಮಗಳಡಿ ಪ್ರಕರಣ ದಾಖಲಾಗಿದ್ದರೂ, ಸರ್ಕಾರಿ ನೌಕರರಿಗೆ ಜಾಮೀನು ಸಂಪೂರ್ಣ ನಿಷಿದ್ಧವಲ್ಲ ಎಂದೂ ಕೋರ್ಟ್‌ ತಿಳಿಸಿದೆ.

Follow Us:
Download App:
  • android
  • ios