ಕೇರಳದಲ್ಲಿ ನಡೆದ ಲವ್ ಜಿಹಾದ್ ರೂಪ ಪಡೆದುಕೊಂಡಿದ್ದ ಮುಸ್ಲಿಂ ಯುವಕ ಹಿಂದೂ ಯುವತಿ ಮದುವೆ ಪ್ರಕರಣಕ್ಕೆ ಇದೀಗ ಮತ್ತೊಂದು ತಿರುವು ಪಡೆದುಕೊಂಡಿದೆ.
ದಿಲ್ಲಿ : ಕೇರಳದಲ್ಲಿ ನಡೆದ ಲವ್ ಜಿಹಾದ್ ರೂಪ ಪಡೆದುಕೊಂಡಿದ್ದ ಮುಸ್ಲಿಂ ಯುವಕ ಹಿಂದೂ ಯುವತಿ ಮದುವೆ ಪ್ರಕರಣಕ್ಕೆ ಇದೀಗ ಮತ್ತೊಂದು ತಿರುವು ಪಡೆದುಕೊಂಡಿದೆ.
ಕೇರಳ ಹೈ ಕೋರ್ಟ್ ಅನೂರ್ಜಿತಗೊಳಿಸಿ ಹಾದಿಯಾಳನ್ನು ಆಕೆಯ ತಂದೆ ತಾಯಿಯೊಂದಿಗೆ ಕಳುಹಿಸಿತ್ತು. ಆದರೆ ಆಕೆ ತಾನು ಒಪ್ಪಿಯೇ ವಿವಾಹವಾಗಿದ್ದು ಇದು ಲವ್ ಜಿಹಾದ್ ಅಲ್ಲ ಎಂದು ಹೇಳಿಕೆ ನೀಡಿದ್ದಳು.
ಬಳಿಕ ಹಾದಿಯಾ ಪತಿ ಸುಪ್ರೀಂ ಕೋರ್ಟ್ ಮೆಟ್ಟಿಲೇರಿದ್ದರು. ಇದೀಗ ಪ್ರಕರಣವನ್ನು ವಿಚಾರಣೆ ನಡೆಸಿದ ಸುಪ್ರೀಂಕೋರ್ಟ್ ಮುಖ್ಯ ನ್ಯಾಯಮೂರ್ತಿ ದೀಪಕ್ ಮಿಶ್ರಾ ಮತ್ತು ನ್ಯಾ.ಎ.ಎಂ ಕನ್ವಿಲ್ಕರ್ ಹಾಗೂ ಡಿವೈ ಚಂದ್ರಚೂಡ ಅವರಿದ್ದ ನ್ಯಾಯಪೀಠ ಮದುವೆಯನ್ನು ಊರ್ಜಿತಗೊಳಿಸಿದ್ದು, ಅವರಿಬ್ಬರು ಕಾನೂನಿನ ಪ್ರಕಾರವಾಗಿ ವಿವಾಹವಾಗಿದ್ದು, ಇಚ್ಛೆಗೆ ಅನುಗುಣವಾಗಿ ಒಟ್ಟಿಗೆ ಜೀವನ ನಡೆಸಬಹುದು ಎಂದು ಹೇಳಿದೆ. ಕೇರಳ ಹೈ ಕೋರ್ಟ್ ಅಮಾನ್ಯ ಮಾಡಿದ್ದ ವಿವಾಹವನ್ನು ಇದೀಗ ಸುಪ್ರೀಂಕೋರ್ಟ್ ಮಾನ್ಯ ಮಾಡಿದೆ.
