Asianet Suvarna News Asianet Suvarna News

ರಾಜಕೀಯ ಪಕ್ಷಗಳ ಕೋಮು ಕಾರ್ಯಸೂಚಿ ಬಗ್ಗೆ ವಿಚಾರಣೆ ನಡೆಸಲು ಒಪ್ಪದ ಸುಪ್ರೀಂ ಕೋರ್ಟ್

ರಾಜಕೀಯ ಪಕ್ಷವೊಂದರ ಕೋಮು ಕಾರ್ಯರ್ಸೂಚಿಯು ಆ ಪಕ್ಷದ ಅಭ್ಯರ್ಥಿಯ ಕಾರ್ಯಸೂಚಿ ಕೂಡಾ ಆಗಿರುತ್ತದೆ, ಆದುದರಿಂದ ಅವುಗಳಿಗೆ ಕಡಿವಾಣ ಹಾಕಬೇಕು ಎಂದು ಹಿರಿಯ ವಕೀಲ ಹಾಗೂ ಪ್ರಕರಣದ ಕಕ್ಷಿದಾರನಾಗಿರುವ ಕಪಿಲ್ ಸಿಬಲ್ ವಾದಿಸಿದ್ದರು.

SC Says It Will Not Hear Issues of Communal Agenda of Political Parties

ನವದೆಹಲಿ (ಅ.26): ರಾಜಕೀಯ ಪಕ್ಷವೊಂದರ ಕೋಮು ಕಾರ್ಯರ್ಸೂಚಿಯು, ಆ ಪಕ್ಷದ ಅಭ್ಯರ್ಥಿಯ ಕಾರ್ಯಸೂಚಿಯನ್ನಾಗಿ ಪರಿಗಣಿಸಬಹುದೋ ಇಲ್ಲವೋ ಎಂಬ ವಾದವನ್ನು ವಿಚಾರಣೆ ನಡೆಸಲು ಸುಪ್ರೀಂ ಕೋರ್ಟ್ ನಿರಾಕರಿಸಿದೆ.

 ಈ ವಿಚಾರವು ಕೋರ್ಟ್’ನ  7 ಮಂದಿ ಸದಸ್ಯರ ಸಾಂವಿಧಾನಿಕ ಪೀಠದ ಮುಂದೆ ಬಂದಿಲ್ಲ, ಹಾಗಾಗಿ ಅದರ ವಿಚಾರಣೆ ನಡೆಸುವುದಿಲ್ಲ ಎಂದು ಮುಖ್ಯ ನ್ಯಾಯಾಧೀಶ ಟಿ.ಎಸ್.ಠಾಕೂರ್ ಹೇಳಿದ್ದಾರೆ.

ರಾಜಕೀಯ ಪಕ್ಷವೊಂದರ ಕೋಮು ಕಾರ್ಯರ್ಸೂಚಿಯು ಆ ಪಕ್ಷದ ಅಭ್ಯರ್ಥಿಯ ಕಾರ್ಯಸೂಚಿ ಕೂಡಾ ಆಗಿರುತ್ತದೆ, ಆದುದರಿಂದ ಅವುಗಳಿಗೆ ಕಡಿವಾಣ ಹಾಕಬೇಕು ಎಂದು ಹಿರಿಯ ವಕೀಲ ಹಾಗೂ ಪ್ರಕರಣದ ಕಕ್ಷಿದಾರನಾಗಿರುವ ಕಪಿಲ್ ಸಿಬಲ್ ವಾದಿಸಿದ್ದರು.

ಹಿಂದುತ್ವವು ಧರ್ಮವಲ್ಲ, ಅದೊಂದು ಜೀವನ ವಿಧಾನವೆಂದು 1995ರಲ್ಲಿ ತಾನು ನೀಡಿದ್ದ ತೀರ್ಪನ್ನು ಮರು ಪರಿಶೀಲಿಸಲು ಸುಪ್ರೀಂ ಕೋರ್ಟ್ ಕಳೆದ ಮಂಗಳವಾರ ನಿರಾಕರಿಸಿತ್ತು.

Follow Us:
Download App:
  • android
  • ios