ಅಕ್ರಮ ಗಣಿಗಾರಿಕೆ ಪ್ರಕರಣದಲ್ಲಿ ಮಾಜಿ ಮುಖ್ಯಮಂತ್ರಿಗಳಾದ ಧರಮ್ ಸಿಂಗ್ ಹಾಗೂ ಎಚ್.ಡಿ. ಕುಮಾರಸ್ವಾಮಿ ವಿರುದ್ಧ ತನಿಖೆಗೆ ಸುಪ್ರೀಂ ಕೋರ್ಟ್ ಆದೇಶಿಸಿದೆ.
ನವದೆಹಲಿ (ಮಾ.29): ಅರಣ್ಯ ಭೂಮಿಯಲ್ಲಿ ಗಣಿಗಾರಿಕೆಗೆ ಅನುಮತಿ ನೀಡಿರುವ ಪ್ರಕರಣದಲ್ಲಿ ರಾಜ್ಯದ ಇಬ್ಬರು ಮಾಜಿ ಮುಖ್ಯಮಂತ್ರಿಗಳಿಗೆ ಕಂಟಕ ಎದುರಾಗಿದೆ..
ಅಕ್ರಮ ಗಣಿಗಾರಿಕೆ ಪ್ರಕರಣದಲ್ಲಿ ಮಾಜಿ ಮುಖ್ಯಮಂತ್ರಿಗಳಾದ ಧರಮ್ ಸಿಂಗ್ ಹಾಗೂ ಎಚ್.ಡಿ. ಕುಮಾರಸ್ವಾಮಿ ವಿರುದ್ಧ ತನಿಖೆಗೆ ನ್ಯಾ. ರೋಲಿಂಗ್ಟನ್ ನಾರಿಮನ್ ಆದೇಶಿಸಿದ್ದಾರೆ.
ಆದರೆ ಮಾಜಿ ಮುಖ್ಯಮಂತ್ರಿ ಎಸ್.ಎಂ.ಕೃಷ್ಣ ವಿರುದ್ಧ ತನಿಖೆಗೆ ತಡೆಯಾಜ್ಞೆಯನ್ನು ಸುಪ್ರೀಂ ಕೋರ್ಟ್ ಮುಂದುವರೆಸಿದೆ. 2012ರಲ್ಲಿ ಎಸ್.ಎಂ.ಕೃಷ್ಣ ವಿರುದ್ಧ ತನಿಖೆಗೆ ಸುಪ್ರೀಂ ತಡೆ ನೀಡಿತ್ತು
ಆಕ್ರಮ ಗಣಿಗಾರಿಕೆ ಕುರಿತು ನ್ಯಾ. ಸಂತೋಷ್ ಹೆಗ್ಡೆ ಸಲ್ಲಿಸಿರುವ ವರದಿಯಲ್ಲಿರುವ ಎಲ್ಲರ ವಿರುದ್ಧವೂ ತನಿಖೆ ನಡೆಸಲು ಸುಪ್ರೀಂ ಸೂಚಿಸಿದೆ. ಆದುದರಿಂದ ಹಿರಿಯ ಆಧಿಕಾರಿಗಳಾದ ವಿ.ಉಮೇಶ್ ಹಾಗೂ ಗಂಗಾರಾಮ್ ಬಡೇರಿಯಾ ವಿರುದ್ಧವೂ ಕೂಡಾ ತನಿಖೆ ನಡೆಯಲಿದೆ.
ಮೂರು ತಿಂಗಳಿನೊಳಗೆ ತನಿಖೆಯ ವರದಿಯನ್ನು ಸಲ್ಲಿಸಲು ಎಸ್'ಐಟಿಗೆ ಸುಪ್ರೀಂ ಸೂಚಿಸಿದೆ.
