ಸಾಕ್ಷ್ಯನಾಶ ಪಡಿಸಬಾರದು, ತನಿಖೆಗೆ ಸಹಕರಿಸಬೇಕು, ಪಾಸ್'ಪೋರ್ಟ್ ಕೋರ್ಟ್'ಗೆ ಹಾಜರುಪಡಿಸಬೇಕು, ಬೆಂಗಳೂರು ಬಿಟ್ಟು ಹೋಗಬಾರದು ಎಂಬ ಷರತ್ತಿನನ್ವಯ ಜಯಚಂದ್ರಗೆ ಜಾಮೀನು ಮಂಜೂರು ಮಾಡಲಾಯಿತು.
ಬೆಂಗಳೂರು(ಡಿ.15): ರಾಜ್ಯ ಹೆದ್ದಾರಿ ಯೋಜನೆಯ ಮುಖ್ಯ ಯೋಜನಾಧಿಕಾರಿ ಎಸ್.ಸಿ ಜಯಚಂದ್ರಗೆ ಸಿಬಿಐ ವಿಶೇಷ ಕೋರ್ಟ್ ಮಧ್ಯಂತರ ಷರತ್ತುಬದ್ಧ ಜಾಮೀನು ನೀಡಿದೆ.
ಪ್ರಿವೆನ್ಸನ್ ಆಫ್ ಮನಿ ಲಾಂಡರಿನ್ ಆ್ಯಕ್ಟ್ ಅನ್ವಯ ಬಂಧಿಸಲಾಗಿದ್ದ ಎಸ್.ಸಿ ಜಯಚಂದ್ರ ಅವರ ವಿಚಾರಣೆ ನಡೆಸಿದ ಸಿಟಿ ಸಿವಿಲ್ ಕೋರ್ಟ್ ಅವರಿಗೆ ಡಿಸೆಂಬರ್ 22ರವರೆಗೆ ಷರತ್ತು ಬದ್ಧ ಜಾಮೀನು ಮಂಜೂರು ಮಾಡಿದೆ.
ಸಾಕ್ಷ್ಯನಾಶ ಪಡಿಸಬಾರದು, ತನಿಖೆಗೆ ಸಹಕರಿಸಬೇಕು, ಪಾಸ್'ಪೋರ್ಟ್ ಕೋರ್ಟ್'ಗೆ ಹಾಜರುಪಡಿಸಬೇಕು, ಬೆಂಗಳೂರು ಬಿಟ್ಟು ಹೋಗಬಾರದು ಎಂಬ ಷರತ್ತಿನನ್ವಯ ಜಯಚಂದ್ರಗೆ ಜಾಮೀನು ಮಂಜೂರು ಮಾಡಲಾಯಿತು.
ಇಡಿ ಪರವಾಗಿ ಕೇಂದ್ರ ಸರ್ಕಾರದ ಸಹಾಯಕ ಸಾಲಿಸಿಟರ್ ಜನರಲ್ ಕೃಷ್ಣ ಧೀಕ್ಷಿತ್ ವಾದ ಮಂಡಿಸಿದ್ದರು.