ರಾಜ್ಯಗಳು ಸಾರ್ವಜನಿಕ ಸೇವಾ ಆಯೋಗ ಮತ್ತು ರಾಜ್ಯ ಆಯ್ಕೆ ಮಂಡಳಿಗಂತಹ ಪ್ರಮುಖ ಸಾರ್ವಜನಿಕ ಹುದ್ದೆಗಳಿಗೆ ನಡೆಸುವ ಆಯ್ಕೆ ಪ್ರಕ್ರಿಯೆಯನ್ನು ವೀಡಿಯೊಗ್ರಾಫಿ ಮಾಡುವುದು ಉತ್ತಮ ಎಂದು ಸುಪ್ರೀಂ ಕೋರ್ಟ್‌ ತಿಳಿಸಿದೆ.

ನವದೆಹಲಿ: ರಾಜ್ಯಗಳು ಸಾರ್ವಜನಿಕ ಸೇವಾ ಆಯೋಗ ಮತ್ತು ರಾಜ್ಯ ಆಯ್ಕೆ ಮಂಡಳಿಗಂತಹ ಪ್ರಮುಖ ಸಾರ್ವಜನಿಕ ಹುದ್ದೆಗಳಿಗೆ ನಡೆಸುವ ಆಯ್ಕೆ ಪ್ರಕ್ರಿಯೆಯನ್ನು ವೀಡಿಯೊಗ್ರಾಫಿ ಮಾಡುವುದು ಉತ್ತಮ ಎಂದು ಸುಪ್ರೀಂ ಕೋರ್ಟ್‌ ತಿಳಿಸಿದೆ.

ಸಂಪೂರ್ಣ ಆಯ್ಕೆ ಪ್ರಕ್ರಿಯೆಯಲ್ಲಿ ‘ಪರಿಶುದ್ಧತೆ’ಯನ್ನು ಕಾಪಾಡುವ ನಿಟ್ಟಿನಲ್ಲಿ ಇದು ಉತ್ತಮ ಎಂದು ಕೋರ್ಟ್‌ ಅಭಿಪ್ರಾಯ ಪಟ್ಟಿದೆ.

ಪರೀಕ್ಷಾ ಕೇಂದ್ರಗಳು ಮತ್ತು ಸಂದರ್ಶಕ ಕೇಂದ್ರಗಳಲ್ಲಿ ಸಿಸಿಟಿವಿ ಕ್ಯಾಮೆರಾಗಳನ್ನು ಅಳವಡಿಸಬೇಕು ಮತ್ತು ಅದರ ತುಣುಕುಗಳನ್ನು ಮೂವರು ಸದಸ್ಯರ ಸ್ವತಂತ್ರ ಸಮಿತಿ ಪರಿಶೀಲಿಸಬೇಕು ಎಂದು ನ್ಯಾ. ಆದರ್ಶ ಕುಮಾರ್‌ ಗೋಯಲ್‌ ಮತ್ತು ನ್ಯಾ. ರೋಹಿಂಟನ್‌ ಫಾಲಿ ನಾರಿಮನ್‌ ನ್ಯಾಯಪೀಠ ತಿಳಿಸಿದೆ. ಈ ಆದೇಶದ ಸಿಬ್ಬಂದಿ ತರಬೇತಿ ಇಲಾಖೆಗೆ ರವಾನಿಸುವಂತೆ ಕೋರ್ಟ್‌ ರಿಜಿಸ್ಟ್ರಿಗೆ ನ್ಯಾಯಪೀಠ ನಿರ್ದೇಶಿಸಿದೆ.