ಸರ್ಕಾರದ ಬೇರೆ ಬೇರೆ ಯೋಜನೆಗಳಿಗೆ ಆಧಾರ್ ಕಾರ್ಡ್ ಜೋಡಣೆ ಮಾಡುವುದನ್ನು ಪ್ರಶ್ನಿಸಿ ಸಲ್ಲಿಸಲಾಗಿರುವ ಅರ್ಜಿಗಳ ವಿಚಾರಣೆ ನಡೆಸಿರುವ ಸುಪ್ರೀಂಕೋರ್ಟ್ ಕೇಂದ್ರ ಸರ್ಕಾರದ ವಾದಕ್ಕೆ ಮನ್ನಣೆ ನೀಡಿದೆ.

ನವದೆಹಲಿ (ಡಿ.15): ಸರ್ಕಾರದ ಬೇರೆ ಬೇರೆ ಯೋಜನೆಗಳಿಗೆ ಆಧಾರ್ ಕಾರ್ಡ್ ಜೋಡಣೆ ಮಾಡುವುದನ್ನು ಪ್ರಶ್ನಿಸಿ ಸಲ್ಲಿಸಲಾಗಿರುವ ಅರ್ಜಿಗಳ ವಿಚಾರಣೆ ನಡೆಸಿರುವ ಸುಪ್ರೀಂಕೋರ್ಟ್ ಕೇಂದ್ರ ಸರ್ಕಾರದ ವಾದಕ್ಕೆ ಮನ್ನಣೆ ನೀಡಿದೆ.

ಆಧಾರ್ ಕಾರ್ಡ್ ಜೋಡಣೆಗೆ ತಡೆ ನೀಡಲು ನಿರಾಕರಿಸಿದ್ದು ಮೊಬೈಲ್ ಫೋನ್ ಸೇರಿದಂತೆ ಬೇರೆ ಬೇರೆ ಸೌಲಭ್ಯಗಳಿಗೆ ಆಧಾರ್ ಕಾರ್ಡ್ ಜೋಡಣೆ ಗಡುವನ್ನು ಮಾರ್ಚ್ 31, 2018 ಕ್ಕೆ ಮುಂದೂಡಿದೆ.

ಮೊಬೈಲ್ ಫೋನ್ ಹೊರತುಪಡಿಸಿ ಬೇರೆ ಎಲ್ಲಾ ಯೋಜನೆಗಳಿಗೆ ಆಧಾರ್ ಕಾರ್ಡ್ ಜೋಡಣೆ ಗಡುವನ್ನು ಮಾರ್ಚ್ 31. 2018 ಕ್ಕೆ ಮುಂದೂಡಿದ್ದೇವೆ ಎಂದು ಕೇಂದ್ರ ಸರ್ಕಾರ ನಿನ್ನೆ ಸುಪ್ರೀಂಕೋರ್ಟ್'ಗೆ ಹೇಳಿತ್ತು. ಇಂದು ವಿಚಾರಣೆ ನಡೆಸಿದ ನ್ಯಾಯಾಲಯ ವಿಶೇಷ ಆದೇಶ ಹೊರಡಿಸಿದೆ.

ಈ ಆದೇಶದ ಪ್ರಕಾರ ಆಧಾರ್ ಕಾರ್ಡ್ ಜೋಡಣೆ ಗಡುವನ್ನು ಮಾರ್ಚ್ 31, 2018 ಕ್ಕೆ ಮುಂದೂಡಿದೆ.