ಗಾಂಧಿ ಹತ್ಯೆ ಮರು ತನಿಖೆಗೆ ಕೋರಿ ಸಲ್ಲಿಸಿದ್ದ ಅರ್ಜಿ ವಜಾ

SC dismisses plea for re investigation into Mahatma Gandhi Assassination case
Highlights

ಮಹಾತ್ಮಾ ಗಾಂಧಿ ಸಾವಿನ ಬಗ್ಗೆ ಮರುತನಿಖೆ ಕೋರಿದ್ದ ಅರ್ಜಿಯನ್ನು ಸರ್ವೋಚ್ಚ ನ್ಯಾಯಾಲಯ ಬುಧವಾರ ವಜಾಗೊಳಿಸಿದೆ.

ನವದೆಹಲಿ: ಮಹಾತ್ಮಾ ಗಾಂಧಿ ಸಾವಿನ ಬಗ್ಗೆ ಮರುತನಿಖೆ ಕೋರಿದ್ದ ಅರ್ಜಿಯನ್ನು ಸರ್ವೋಚ್ಚ ನ್ಯಾಯಾಲಯ ಬುಧವಾರ ವಜಾಗೊಳಿಸಿದೆ.

ಅಭಿನವ ಭಾರತ ಎಂಬ ಸಂಘಟನೆಯ ಪಂಕಜ್ ಫಡ್ನಿಸ್ ಅವರು ಗಾಂಧೀಜಿ ಹತ್ಯೆಯ ಹಿಂದೆ ಗೋಡ್ಸೆ ಅಲ್ಲದೆ ಇನ್ನೊಬ್ಬರ ಕೈವಾಡವಿದೆ. 

ಗಾಂಧೀಜಿ ಅವರ ಹತ್ಯೆ ಕೇವಲ ಮೂರು ಗುಂಡುಗಳಿಂದ ಆಗಿದೆ ಎಂಬುದು ಸುಳ್ಳು. 4ನೇ ಗುಂಡು ಗಾಂಧಿ ಸಾವಿನಲ್ಲಿ ಪಾತ್ರ ವಹಿಸಿದ್ದು, ಈ ಗುಂಡು ಹಾರಿಸಿದ್ದು ಯಾರೆಂಬ ಬಗ್ಗೆ ತನಿಖೆ ನಡೆಸಬೇಕು. ಅರ್ಥಾತ್, ನಾಥೂರಾಂ ಗೋಡ್ಸೆ ಅಲ್ಲದೆ ಇನ್ನೊಬ್ಬ ವ್ಯಕ್ತಿಯು ಗಾಂಧೀಜಿ ಹತ್ಯೆಯ ಹಿಂದಿದ್ದಾನೆ ಎಂದು ವಾದಿಸಿದ್ದರು.

loader