Asianet Suvarna News Asianet Suvarna News

ರೋಹಿಂಗ್ಯಾ ನಿರಾಶ್ರಿತರ ಮಾನವ ಹಕ್ಕುಗಳನ್ನು ಕಡೆಗಣಿಸಲು ಸಾಧ್ಯವಿಲ್ಲ; ನ.21 ರಂದು ಸುಪ್ರೀಂ ವಿಚಾರಣೆ

ಜಗತ್ತಿನಾದ್ಯಂತ ಸುದ್ದಿಯಾಗಿದ್ದ ರೋಹಿಂಗ್ಯಾ ನಿರಾಶ್ರಿತ ಮುಸಲ್ಮಾನರ ಅತಂತ್ರ ಸ್ಥಿತಿಯ ಬಗ್ಗೆ ಸುಪ್ರೀಂಕೋರ್ಟ್ ಕಳಕಳಿ ವ್ಯಕ್ತಪಡಿಸಿದ್ದು ರೋಹಿಂಗ್ಯಾಗಳ ಮಾನವ ಹಕ್ಕುಗಳನ್ನು ಕಡೆಗಣಿಸಲು ಸಾಧ್ಯವಿಲ್ಲ ಎಂದು ಹೇಳಿದೆ.

SC defers hearing in Rohingya Muslims issue to November 21 says state has big role to play

ನವದೆಹಲಿ (ಅ.12): ಜಗತ್ತಿನಾದ್ಯಂತ ಸುದ್ದಿಯಾಗಿದ್ದ ರೋಹಿಂಗ್ಯಾ ನಿರಾಶ್ರಿತ ಮುಸಲ್ಮಾನರ ಅತಂತ್ರ ಸ್ಥಿತಿಯ ಬಗ್ಗೆ ಸುಪ್ರೀಂಕೋರ್ಟ್ ಕಳಕಳಿ ವ್ಯಕ್ತಪಡಿಸಿದ್ದು ರೋಹಿಂಗ್ಯಾಗಳ ಮಾನವ ಹಕ್ಕುಗಳನ್ನು ಕಡೆಗಣಿಸಲು ಸಾಧ್ಯವಿಲ್ಲ ಎಂದು ಹೇಳಿದೆ.

ರೋಹಿಂಗ್ಯಾ ಮುಸಲ್ಮಾನರ ವಿಚಾರದ ವಿಚಾರಣೆಯನ್ನು ಸುಪ್ರೀಂಕೋರ್ಟ್ ನ. 21 ರಂದು ನಡೆಸಲಿದ್ದು, ಏನಾದರೂ ತುರ್ತು ಪರಿಸ್ಥಿತಿ ಇದ್ದರೆ ಅರ್ಜಿದಾರರು ನ್ಯಾಯಾಲಯವನ್ನು ಸಂಪರ್ಕಿಸಬಹುದು ಎಂದು ಸುಪ್ರೀಂಕೋರ್ಟ್ ಹೇಳಿದೆ. ಇವರ ವಿಚಾರದಲ್ಲಿ ಸರ್ಕಾರ ಕೂಡಾ ಪ್ರಮುಖ ಪಾತ್ರ ವಹಿಸುತ್ತದೆ ಎಂದು ಕೋರ್ಟ್ ಹೇಳಿದೆ.

ಇತ್ತೀಚಿನ ಬೆಳವಣಿಗೆಯಲ್ಲಿ, ರೋಹಿಂಗ್ಯಾ ಮುಸಲ್ಮಾನರು ದೇಶದ ಭದ್ರತೆಗೆ ಅಪಾಯಕಾರಿ. ಭಯೋತ್ಪಾದಕ ಸಂಘಟನೆಗಳೊಂದಿಗೆ ಇವರಿಗೆ ನಂಟಿದೆ ಎಂದು ಕೇಂದ್ರ ಗೃಹ ಸಚಿವಾಲಯ ಸುಪ್ರೀಂಕೋರ್ಟ್’ಗೆ ಅಫಿಡವಿಟ್ ಸಲ್ಲಿಸಿದೆ.

ಇದು ಸಾಮಾನ್ಯ ಪ್ರಕರಣವಲ್ಲ. ನಾವು ಇದನ್ನು ಸಮಚಿತ್ತವಾಗಿ ಸಮತೋಲನವಾಗಿ ವಿಚಾರಣೆ ನಡೆಸಬೇಕಾಗಿದೆ. ಇದು ಮಾನವ ಹಕ್ಕುಗಳ ವಿಚಾರವನ್ನು ಒಳಗೊಂಡಿದೆ ಎಂದು ಸುಪ್ರೀಂಕೋರ್ಟ್ ಹೇಳಿದೆ.  

 

Follow Us:
Download App:
  • android
  • ios