ಈ ಕುರಿತು ಕಳೆದ ಶುಕ್ರವಾರವೇ ಬ್ಯಾಂಕ್​ ಅಧಿಕಾರಿಗಳು ಸಮಗ್ರ ಮಾಹಿತಿಯನ್ನು ಸಂಬಂಧಪಟ್ಟ ಇಲಾಖೆಗೆ ನೀಡಿದ್ದರು. ಆದರೂ ಇವತ್ತು ಐಟಿ ಮತ್ತು ಇಡಿ ಅಧಿಕಾರಿಗಳ ತಂಡ ಬ್ಯಾಂಕ್​​ನ ಕೇಂದ್ರ ಕಚೇರಿಗೆ ಭೇಟಿ ನೀಡಿ ದಾಖಲೆಗಳನ್ನು ಪರಿಶೀಲನೆ ನಡೆಸಿತು. 

ಮಂಗಳೂರು (ಡಿ.27): ದಕ್ಷಿಣ ಕನ್ನಡ ಜಿಲ್ಲಾ ಸಹಕಾರಿ ಬ್ಯಾಂಕ್​​ ಮೇಲೆ ಐಟಿ ಮತ್ತು ಜಾರಿ ನಿರ್ದೇಶನಾಲಯ ಹದ್ದಿನಕಣ್ಣು ಇಟ್ಟಿದೆ.

ನೋಟು ನಿಷೇಧದ ಬಳಿಕ ಕೆಲವೇ ದಿನಗಳಲ್ಲಿ ನೂರಾರು ಕೋಟಿ ವ್ಯವಹಾರ ನಡೆದಿರುವ ಬಗ್ಗೆ ಮಾಹಿತಿ ಕೋರಿ ಆದಾಯ ತೆರಿಗೆ ಇಲಾಖೆ ಮತ್ತು ಜಾರಿ ನಿರ್ದೇಶನಾಲಯ ಪ್ರತ್ಯೇಕ ನೋಟೀಸ್ ಜಾರಿ ಮಾಡಿತ್ತು.

ಈ ಕುರಿತು ಕಳೆದ ಶುಕ್ರವಾರವೇ ಬ್ಯಾಂಕ್​ ಅಧಿಕಾರಿಗಳು ಸಮಗ್ರ ಮಾಹಿತಿಯನ್ನು ಸಂಬಂಧಪಟ್ಟ ಇಲಾಖೆಗೆ ನೀಡಿದ್ದರು. ಆದರೂ ಇವತ್ತು ಐಟಿ ಮತ್ತು ಇಡಿ ಅಧಿಕಾರಿಗಳ ತಂಡ ಬ್ಯಾಂಕ್​​ನ ಕೇಂದ್ರ ಕಚೇರಿಗೆ ಭೇಟಿ ನೀಡಿ ದಾಖಲೆಗಳನ್ನು ಪರಿಶೀಲನೆ ನಡೆಸಿತು. 

ಜನ್​’ಧನ್ ಖಾತೆ ಸೇರಿದಂತೆ ಅಕ್ರಮವಾಗಿ ವಹಿವಾಟು ನಡೆದಿರುವ ಖಾತೆಗಳ ವಿವರವನ್ನು ಅಧಿಕಾರಿಗಳು ಸಂಗ್ರಹಿಸಿದರು. ಈ ಭೇಟಿ ವೇಳೆ ಡಿಸಿಸಿ ಬ್ಯಾಂಕ್ ಅಧಿಕಾರಿಗಳು, ವ್ಯವಸಾಯ ಸೇವಾ ಸಂಘಗಳ ಅಧಿಕಾರಿಗಳು ಉಪಸ್ಥಿತರಿದ್ದರು.