ಎನ್ ಜಿಓ ಗಳಿಗೆ ಬರುವ ಅನುದಾನಗಳ ಕುರಿತು ಲೆಕ್ಕಪತ್ರಗಳನ್ನು ಕೇಂದ್ರ ಸರ್ಕಾರ ಸರಿಯಾಗಿ ನಿರ್ವಹಣೆ ಮಾಡಿಲ್ಲವೆಂದು ಸುಪ್ರೀಂಕೋರ್ಟ್ ಅಸಮಾಧಾನ ವ್ಯಕ್ತಪಡಿಸಿದೆ.

ನವದೆಹಲಿ (ಜ.10): ಎನ್ ಜಿಓ ಗಳಿಗೆ ಬರುವ ಅನುದಾನಗಳ ಕುರಿತು ಲೆಕ್ಕಪತ್ರಗಳನ್ನು ಕೇಂದ್ರ ಸರ್ಕಾರ ಸರಿಯಾಗಿ ನಿರ್ವಹಣೆ ಮಾಡಿಲ್ಲವೆಂದು ಸುಪ್ರೀಂಕೋರ್ಟ್ ಅಸಮಾಧಾನ ವ್ಯಕ್ತಪಡಿಸಿದೆ.

ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿgooglePreferred

ಒಟ್ಟು 32 ಲಕ್ಷ ಎನ್ ಜಿಓಗಳಲ್ಲಿ ಕೇವಲ 3 ಲಕ್ಷ ಎನ್ ಜಿಒಗಳು ಮಾತ್ರ ಲೆಕ್ಕಪತ್ರಗಳ ವಿವರವನ್ನು ಸಲ್ಲಿಕೆ ಮಾಡಿದೆ ಎಂದು ವಕೀಲ ಮನೋಹರ್ ಲಾಲ್ ಶರ್ಮಾ ಸುಪ್ರೀಂಕೋರ್ಟ್ ನಲ್ಲಿ ಅರ್ಜಿ ಸಲ್ಲಿಸಿದ್ದರು. ಅರ್ಜಿ ಕೈಗೆತ್ತಿಕೊಂಡ ನ್ಯಾ. ಜಗದೀಶ್ ಸಿಂಗ್ ಖೇಹರ್ ಪೀಠವು ಕೇಂದ್ರ ಸರ್ಕಾರದ ವಿರುದ್ಧ ಅಸಮಾಧಾನ ವ್ಯಕ್ತಪಡಿಸಿದೆ.

ಇದುವರೆಗೆ ಯಾವ ಎನ್ ಜಿಒಗಳು ತಮಗೆ ಬಂದಿರುವ ಅನುದಾನಗಳ ಬಗ್ಗೆ ಲೆಕ್ಕಪತ್ರಗಳನ್ನು ಸಲ್ಲಿಸಿಲ್ಲವೋ, ಸಾರ್ವಜನಿಕ ಅನುದಾನಗಳನ್ನು ದುರ್ಬಳಕೆ ಮಾಡಿಕೊಂಡಿದ್ದಾವೋ, ಬೇರೆ ಉದ್ದೇಶಗಳಿಗೆ ಬಳಸಿಕೊಂಡಿದ್ದಾವೋ ಅದನ್ನು ಸಿವಿಲ್ ಹಾಗೂ ಕ್ರಿಮಿನಲ್ ಅಪರಾಧವೆಂದು ಪರಿಗಣಿಸಲಾಗುವುದು ಎಂದು ಸುಪ್ರೀಂಕೋರ್ಟ್ ಕಟ್ಟುನಿಟ್ಟಾಗಿ ಹೇಳಿದೆ. ಜೊತೆಗೆ ದೇಶಾದ್ಯಂತ ಇರುವ ಎನ್ ಜಿಓಗಳ ಲೆಕ್ಕಪತ್ರಗಳನ್ನು ಆಡಿಟ್ ಮಾಡಲು ತಯಾರಿ ನಡೆಸಿ ಎಂದು ಕೇಂದ್ರಕ್ಕೆ ನಿರ್ದೇಶಿಸಿದೆ.