ಕೇರಳದಲ್ಲಿ ಸೌಮ್ಯ ಎಂಬ ಯುವತಿಯ ಅತ್ಯಾಚಾರ ಪ್ರಕರಣಕ್ಕೆ ಸಂಬಂಧಿಸಿದಂತೆ ವಿವಾದಾತ್ಮತವಾಗಿ ತಮ್ಮ ಬ್ಲಾಗ್ ನಲ್ಲಿ ಬರೆದುಕೊಂಡಿರುವ ನಿವೃತ್ತ ನ್ಯಾ. ಮಾರ್ಕಂಡೇಯ ಕಾಟ್ಜು ಯಾಚಿಸಿರುವ ಕ್ಷಮೆಯನ್ನು ಸುಪ್ರೀಂಕೋರ್ಟ್ ಇಂದು ಒಪ್ಪಿಕೊಂಡಿದೆ. ಅವರ ಮೇಲಿರುವ ವಿಚಾರಣೆಯನ್ನು ವಜಾಗೊಳಿಸಿದೆ.
ನವದೆಹಲಿ (ಜ.06): ಕೇರಳದಲ್ಲಿ ಸೌಮ್ಯ ಎಂಬ ಯುವತಿಯ ಅತ್ಯಾಚಾರ ಪ್ರಕರಣಕ್ಕೆ ಸಂಬಂಧಿಸಿದಂತೆ ವಿವಾದಾತ್ಮತವಾಗಿ ತಮ್ಮ ಬ್ಲಾಗ್ ನಲ್ಲಿ ಬರೆದುಕೊಂಡಿರುವ ನಿವೃತ್ತ ನ್ಯಾ. ಮಾರ್ಕಂಡೇಯ ಕಾಟ್ಜು ಯಾಚಿಸಿರುವ ಕ್ಷಮೆಯನ್ನು ಸುಪ್ರೀಂಕೋರ್ಟ್ ಇಂದು ಒಪ್ಪಿಕೊಂಡಿದೆ. ಅವರ ಮೇಲಿರುವ ವಿಚಾರಣೆಯನ್ನು ವಜಾಗೊಳಿಸಿದೆ.
ಸುಪ್ರೀಂಕೋರ್ಟ್ ಮಾಜಿ ನ್ಯಾಯಮೂರ್ತಿಯ ಮೇಲೆ ಸೂ ಮೋಟೋ ನೋಟಿಸ್ ಹೊರಡಿಸಿರುವುದು ಭಾರತದ ನ್ಯಾಯಾಂಗ ವ್ಯವಸ್ಥೆಯಲ್ಲಿ ಇದೇ ಮೊದಲ ಬಾರಿಯಾಗಿದೆ.
ಕೇರಳದಲ್ಲಿ ಸೌಮ್ಯಾ ಎಂಬ ಯುವತಿಯ ಅತ್ಯಾಚಾರಕ್ಕೆ ಸಂಬಂಧಿಸಿದಂತೆ ತೀರ್ಪು ನೀಡಿದ ನ್ಯಾಯಾಧೀಶರ ಬಗ್ಗೆ ಕಾಟ್ಜು ಆಕ್ಷೇಪವೆತ್ತಿದ್ದರು. ಇದು ಸಾಕಷ್ಟು ಚರ್ಚೆಗೆ ಗ್ರಾಸವಾಗಿತ್ತು. ಬಳಿಕ ಕಾಟ್ಜು ಕ್ಷಮೆಯಾಚಿಸಿದ್ದರು.
