ಮೊನ್ನೆಯಷ್ಟೇ ನೂರು ವರ್ಷಗಳನ್ನು ಪೂರೈಸಿದ್ದ ದೇಶದ ಅತಿ ದೊಡ್ಡ ಬ್ಯಾಂಕ್, ಇಂದಿನಿಂದ SBI ಜೊತೆ ವಿಲೀನವಾಗಲಿದೆ. ಸ್ಟೇಟ್ ಬ್ಯಾಂಕ್ ಆಫ್ ಮೈಸೂರು, ಇನ್ಮುಂದೆ ಎಸ್'​​ಬಿಐ ನೇತೃತ್ವದಲ್ಲಿ ಮುಂದುವರೆಯಲಿದೆ.

ಬೆಂಗಳೂರು(ಎ.01): ಮೊನ್ನೆಯಷ್ಟೇ ನೂರು ವರ್ಷಗಳನ್ನು ಪೂರೈಸಿದ್ದ ದೇಶದ ಅತಿ ದೊಡ್ಡ ಬ್ಯಾಂಕ್, ಇಂದಿನಿಂದ SBI ಜೊತೆ ವಿಲೀನವಾಗಲಿದೆ. ಸ್ಟೇಟ್ ಬ್ಯಾಂಕ್ ಆಫ್ ಮೈಸೂರು, ಇನ್ಮುಂದೆ ಎಸ್'​​ಬಿಐ ನೇತೃತ್ವದಲ್ಲಿ ಮುಂದುವರೆಯಲಿದೆ.

ರಾಜ್ಯದ ಬೃಹತ್ ಮತ್ತು ಹೆಮ್ಮೆಯ ಬ್ಯಾಂಕ್ ಆಗಿದ್ದ SBM, ಇಂದಿನಿಂದ SBI ಆಗಲಿದೆ. ಆದರೆ ಇದರಿಂದ ಗ್ರಾಹಕರಿಗೆ ಯಾವುದೇ ರೀತಿಯ ತೊಂದರೆಯಾಗುವುದಿಲ್ಲ. ಹಣದ ವಹಿವಾಟು, ವ್ಯವಹಾರಗಳೆಲ್ಲಾ ಎಂದಿನಂತೆ ಸಾಗಲಿದೆ. ಅಕೌಂಟ್ ನಂಬರ್, ಡೆಬಿಟ್ ಕಾರ್ಡ್​ ನಂಬರ್, ಮತ್ತು ಎಲ್ಲಾ ರೀತಿಯ ಸೆಕ್ಯೂರಿಟಿ ಪಿನ್ ಸೇರಿದಂತೆ, ವ್ಯವಹಾರಿಕವಾಗಿ ಯಾವುದೇ ರೀತಿಯ ತೊಂದರೆಯಾಗುವುದಿಲ್ಲ ಎಂದು ಉಭಯ ಬ್ಯಾಂಕ್'ಗಳ ಮ್ಯಾನೇಜರ್'ಗಳು ಸ್ಪಷ್ಟನೆ ನೀಡಿದ್ದಾರೆ.

ಕೇವಲ ಬ್ಯಾಂಕ್'ನ ಹೆಸರು ಮಾತ್ರ ಬಡಲಾಗುತ್ತಿದ್ದು, ಉಳಿದೆಲ್ಲಾ ಕಾರ್ಯವು ಎಂದಿನಂತೆ ನಡೆಯಲಿದೆ ಎಂದು ಸ್ಪಷ್ಟನೆ ನೀಡಿದ್ದಾರೆ.