ಮಾ.31ಕ್ಕೆ ಮುಕ್ತಾಯಗೊಂಡ 2017-18ನೇ ಸಾಲಿನ ಹಣಕಾಸು ವರ್ಷದ ಕೊನೆಯ ತ್ರೈಮಾಸಿಕದಲ್ಲಿ ದೇಶದ ಅತಿದೊಡ್ಡ ಬ್ಯಾಂಕ್‌ ಎನಿಸಿಕೊಂಡಿರುವ ಭಾರತೀಯ ಸ್ಟೇಟ್‌ ಬ್ಯಾಂಕ್‌ (ಎಸ್‌ಬಿಐ) ಬರೋಬ್ಬರಿ 7718 ಕೋಟಿ ರು. ನಷ್ಟಅನುಭವಿಸಿದೆ.  

ನವದೆಹಲಿ: ಮಾ.31ಕ್ಕೆ ಮುಕ್ತಾಯಗೊಂಡ 2017-18ನೇ ಸಾಲಿನ ಹಣಕಾಸು ವರ್ಷದ ಕೊನೆಯ ತ್ರೈಮಾಸಿಕದಲ್ಲಿ ದೇಶದ ಅತಿದೊಡ್ಡ ಬ್ಯಾಂಕ್‌ ಎನಿಸಿಕೊಂಡಿರುವ ಭಾರತೀಯ ಸ್ಟೇಟ್‌ ಬ್ಯಾಂಕ್‌ (ಎಸ್‌ಬಿಐ) ಬರೋಬ್ಬರಿ 7718 ಕೋಟಿ ರು. ನಷ್ಟಅನುಭವಿಸಿದೆ. 

ಇದು ಜನವರಿ- ಮಾರ್ಚ್ ತ್ರೈಮಾಸಿಕದಲ್ಲಿ ಎಸ್‌ಬಿಐ ಅನುಭವಿಸಿದ ಅತಿದೊಡ್ಡ ನಷ್ಟವಾಗಿದೆ. ಕೆಟ್ಟಸಾಲ (ಎನ್‌ಪಿಎ), ವೇತನ ಪರಿಷ್ಕರಣೆಯಿಂದಾಗಿ ಲಾಭಕ್ಕೆ ಹೊಡೆತ ಬಿದ್ದಿದೆ ಎಂದು ಬ್ಯಾಂಕ್‌ ಹೇಳಿಕೆ ಬಿಡುಗಡೆ ಮಾಡಿದೆ. 2017ರ ಮಾರ್ಚ್ ಗೆ ಮುಕ್ತಾಯಗೊಂಡ ಹಣಕಾಸು ವರ್ಷದಲ್ಲಿ ಬ್ಯಾಂಕ್‌ 10484 ಕೋಟಿ ರು. ಲಾಭ ಗಳಿಸಿತ್ತು. ಕೊನೆಯ ತ್ರೈಮಾಸಿಕದಲ್ಲಿ 2416 ಕೋಟಿ ರು. ಲಾಭ ಗಳಿಸಿತ್ತು. 

ಆದರೆ 2018ರ ಮಾಚ್‌ರ್‍ಗೆ ಅಂತ್ಯಗೊಂಡ ಒಟ್ಟಾರೆ ವಿತ್ತೀಯ ವರ್ಷದಲ್ಲಿ 6547 ಕೋಟಿ ರು. ನಷ್ಟಅನುಭವಿಸಿದೆ. ಆದರೆ ಈ ನಷ್ಟಕೇವಲ ಎಸ್‌ಬಿಐ ಒಂದರಲ್ಲೇ ಅಲ್ಲ, ಅದರೊಂದಿಗೆ ವಿಲೀನವಾದ ಇತರೆ 6 ಬ್ಯಾಂಕ್‌ಗಳದ್ದೂ ಸೇರಿ ಆಗಿರುವಂಥದ್ದು.