ನವದೆಹಲಿ (ಜು. 31): ಸರ್ಕಾರಿ ಸ್ವಾಮ್ಯದ ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ, ತನ್ನ ವಿವಿಧ ಅವಧಿಯ ಠೇವಣಿಗಳ ಬಡ್ಡಿದರವನ್ನು ಶೇ.0.05 ರಿಂದ ಶೇ. 0.1 ರವರೆಗೆ ಏರಿಸಿದೆ.

ಜುಲೈ 30 ರಿಂದಲೇ ಹೊಸ ದರ ಜಾರಿಗೆ ಬರಲಿದೆ. 1 ರಿಂದ 2 ವರ್ಷದ ಠೇವಣಿ ಬಡ್ಡಿದರವನ್ನು ಶೇ.6.65  ರಿಂದ ಶೇ.6.70 ಕ್ಕೆ,  2 ರಿಂದ 3 ವರ್ಷದ ಠೇವಣಿಗೆ ಶೇ.6.65 ರಿಂದ ಶೇ. 6.75, ಹಿರಿಯ ನಾಗರಿಕರ 1 ರಿಂದ 2 ವರ್ಷದ ಠೇವಣಿಗೆ ಶೇ.7.15 ರಿಂದ ಶೇ.7.20, 2 ರಿಂದ 3 ವರ್ಷದ ಠೇವಣಿಗೆ ಶೇ.7.15ರಿಂದ ಶೇ 7.25 ರಷ್ಟು ಏರಿಕೆ ಮಾಡಲಾಗಿದೆ. ಈ ಎಲ್ಲಾ ದರಗಳು 1 ಕೋಟಿ ರು.ಗಿಂತ ಕಡಿಮೆ ಠೇವಣಿಗೆ ಅನ್ವಯವಾಗಲಿದೆ.