ಎಸ್'ಬಿಐ 20 ಎಂಸಿ'ಎಲ್'ಆರ್ ಬೇಸಿಕ್ ಪಾಯಿಂಟ್'ಗಳನ್ನು ಏರಿಕೆ ಮಾಡಿದ್ದು, ಕಳೆದ ವರ್ಷ ಎಂಸಿ'ಎಲ್'ಆರ್'ಅನ್ನು 5 ಪಾಯಿಂಟ್ ಏರಿಸಲಾಗಿತ್ತು.

ಮುಂಬೈ(ಮಾ.01): ದೇಶದ ಅತೀ ದೊಡ್ಡ ಬ್ಯಾಂಕ್ ಆದ ಎಸ್'ಬಿಐ ಸಾಲದ ದರಗಳ ಬಡ್ಡಿ ದರವನ್ನು ಶೇ.7.95ರಿಂದ 8.15ಕ್ಕೆ ಏರಿಸಿದ್ದು, ಇಎಂಐ ಮೇಲಿನ ಬಡ್ಡಿ ದರಗಳು ಇಂದಿನಿಂದಲೇ ಹೆಚ್ಚಳಗೊಳ್ಳಲಿವೆ.

ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿgooglePreferred

ಆರ್'ಬಿಐ ನಿರ್ದೇಶನದ ಅನ್ವಯ ಬಡ್ಡಿದರಗಳನ್ನು ಏರಿಸಿದೆ. ಈ ನಿರ್ಧಾರದಿಂದ ಮಧ್ಯಮ ವರ್ಗಕ್ಕೆ ಗೃಹ ಮತ್ತು ಕಾರಿನ ಸಾಲಗಳ ಮೇಲಿನ ಬಡ್ಡಿ ದರ ಹೆಚ್ಚಳವಾಗಲಿದೆ. ಎಸ್'ಬಿಐ 20 ಎಂಸಿ'ಎಲ್'ಆರ್ ಬೇಸಿಕ್ ಪಾಯಿಂಟ್'ಗಳನ್ನು ಏರಿಕೆ ಮಾಡಿದ್ದು, ಕಳೆದ ವರ್ಷ ಎಂಸಿ'ಎಲ್'ಆರ್'ಅನ್ನು 5 ಪಾಯಿಂಟ್ ಏರಿಸಲಾಗಿತ್ತು.

ಈ ಬಡ್ಡಿ ದರಗಳು ಇಂದಿನಿಂದ ಜಾರಿಗೆ ಬಂದರೂ ಏಪ್ರಿಲ್ 2016ಕ್ಕೆ ಅನ್ವಯವಾಗಲಿವೆ. ಎಸ್'ಬಿಐ'ನಂತೆ ಪಂಜಾಬ್ ನ್ಯಾಷನಲ್ ಬ್ಯಾಂಕ್,ಐಸಿಐಸಿಐ ಬ್ಯಾಂಕ್'ಗಳು ಬಡ್ಡಿ ದರವನ್ನು ಹೆಚ್ಚಳಗೊಳಿಸಿವೆ. ಈ ಬ್ಯಾಂಕ್'ಗಳ ಎಂಸಿಎಲ್'ಆರ್ ದರವನ್ನು 15 ಪಾಯಿಂಟ್ ಏರಿಸಿವೆ.