ಸಾಲದ ಅವಧಿಗೆ ತಕ್ಕಂತೆ ಬಡ್ಡಿದರದಲ್ಲಿ ಇಳಿಕೆ ಮಾಡಲಾಗಿದೆ. ಶೇ.8.90ರಷ್ಟಿದ್ದ ಒಂದು ವರ್ಷ ಅವಧಿ ಸಾಲದ ಬಡ್ಡಿದರ ಶೇ.8.00, ಎರಡು ವರ್ಷಗಳ ಸಾಲಕ್ಕೆ ಶೇ.8.10 ಹಾಗೂ ಮೂರು ವರ್ಷಕ್ಕೆ ಶೇ.8.15 ಆಗಿದೆ.

ನವದೆಹಲಿ (ಜ.01): ದೇಶದ ಬ್ಯಾಂಕಿಂಗ್‌ ಕ್ಷೇತ್ರದಲ್ಲಿ ಪ್ರಮುಖ ಸ್ಥಾನ ಹೊಂದಿರುವ ಸ್ಟೇಟ್‌ ಬ್ಯಾಂಕ್‌ ಆಫ್‌ ಇಂಡಿಯಾ ಸಾಲದ ಮೇಲಿನ ಬಡ್ಡಿದರ ಶೇ.0.90ರಷ್ಟು ಇಳಿಕೆ ಮಾಡಿದೆ.

ಸಾಲದ ಅವಧಿಗೆ ತಕ್ಕಂತೆ ಬಡ್ಡಿದರದಲ್ಲಿ ಇಳಿಕೆ ಮಾಡಲಾಗಿದೆ. ಶೇ.8.90ರಷ್ಟಿದ್ದ ಒಂದು ವರ್ಷ ಅವಧಿ ಸಾಲದ ಬಡ್ಡಿದರ ಶೇ.8.00, ಎರಡು ವರ್ಷಗಳ ಸಾಲಕ್ಕೆ ಶೇ.8.10 ಹಾಗೂ ಮೂರು ವರ್ಷಕ್ಕೆ ಶೇ.8.15 ಆಗಿದೆ.

ಮಹಿಳೆಯರಿಗೆ ಶೇ.8.20 ಹಾಗೂ ಇತರರಿಗೆ ಶೇ.8.25 ಬಡ್ಡಿದರದಲ್ಲಿ ಗೃಹಸಾಲ ದೊರೆಯಲಿದೆ. ಬಡ್ಡಿದರ ಇಳಿಕೆಯು ಜನವರಿ 1ರಿಂದಲೇ ಅನ್ವಯವಾಗಲಿದೆ.

ಇನ್ನೂ ಸಾಲದ ಮೇಲಿನ ಬಡ್ಡಿದರವನ್ನು ಯೂನಿಯನ್‌ ಬ್ಯಾಂಕ್‌ ಆಫ್‌ ಇಂಡಿಯಾ ಶೇ.0.65 ಮತ್ತು ಐಡಿಬಿಐ ಬ್ಯಾಂಕ್‌ ಶೇ.0.40ರಷ್ಟು ಇಳಿಕೆ ಮಾಡಿವೆ.

ನೋಟು ರದ್ದತಿ ಬಳಿಕ ₹10ಲಕ್ಷ ಕೋಟಿಗೂ ಹೆಚ್ಚು ಹಣ ಬ್ಯಾಂಕ್‌ ಖಾತೆಗಳಲ್ಲಿ ಜಮೆಯಾಗಿದೆ. ಹೀಗಾಗಿ ಬ್ಯಾಂಕ್‌ಗಳು ಸಾಲದ ಮೇಲಿನ ಬಡ್ಡಿದರ ಇಳಿಕೆ ಮಾಡುವ ಕುರಿತು ನಿರೀಕ್ಷಿಸಲಾಗಿತ್ತು.