ಕಳೆದ ಏಪ್ರಿಲ್‌ನಿಂದ ಈ ವರ್ಷದ ಜನವರಿವರೆಗೆ ಸ್ಟೇಟ್‌ ಬ್ಯಾಂಕ್‌ ಆಫ್‌ ಇಂಡಿಯಾ, ಕನಿಷ್ಠ ಮಾಸಿಕ ಮೊತ್ತ ನಿರ್ವಹಿಸದ 41.16 ಲಕ್ಷ ಉಳಿತಾಯ ಖಾತೆಗಳನ್ನು ರದ್ದುಪಡಿಸಿದೆ.

ಇಂದೋರ್‌: ಕಳೆದ ಏಪ್ರಿಲ್‌ನಿಂದ ಈ ವರ್ಷದ ಜನವರಿವರೆಗೆ ಸ್ಟೇಟ್‌ ಬ್ಯಾಂಕ್‌ ಆಫ್‌ ಇಂಡಿಯಾ, ಕನಿಷ್ಠ ಮಾಸಿಕ ಮೊತ್ತ ನಿರ್ವಹಿಸದ 41.16 ಲಕ್ಷ ಉಳಿತಾಯ ಖಾತೆಗಳನ್ನು ರದ್ದುಪಡಿಸಿದೆ.

ಐದು ವರ್ಷಗಳ ಅಂತರದ ಬಳಿಕ, ಕಳೆದ ಏಪ್ರಿಲ್‌ನಲ್ಲಿ ಎಸ್‌ಬಿಐ ಕನಿಷ್ಠ ಮಾಸಿಕ ಮೊತ್ತ ನಿರ್ವಹಿಸದ ಖಾತೆಗಳಿಗೆ ದಂಡ ವಿಧಿಸುವ ನೀತಿಯನ್ನು ಜಾರಿಗೊಳಿಸಿತ್ತು.

ಬಳಿಕ ಶುಲ್ಕದ ಪ್ರಮಾಣ ಮರುಪರಿಶೀಲಿಸಿತ್ತು. ಮಧ್ಯಪ್ರದೇಶದ ಆರ್‌ಟಿಐ ಕಾರ್ಯಕರ್ತರೊಬ್ಬರು ಸಲ್ಲಿಸಿದ್ದ ಅರ್ಜಿಗೆ ಈ ಮಾಹಿತಿಗಳು ಲಭ್ಯವಾಗಿವೆ. ಎಸ್‌ಬಿಐನಲ್ಲಿ 41 ಕೋಟಿ ಉಳಿತಾಯ ಖಾತೆಗಳಿದ್ದು, ಅವುಗಳಲ್ಲಿ 16 ಕೋಟಿ ಸರಕಾರಿ ಸವಲತ್ತು ಫಲಾನುಭವಿಗಳ ಖಾತೆಗಳಿಗೆ ಕನಿಷ್ಠ ಮೊತ್ತ ನೀತಿ ಅನ್ವಯವಾಗುವುದಿಲ್ಲ.