ನೀವು ಎಸ್ ಬಿ ಐ ಗ್ರಾಹಕರೇ ಹಾಗಾದರೆ ಇಲ್ಲೊಮ್ಮೆ ಗಮನಿಸಿ.  ದೇಶದ ಸುಮಾರು 1,300 ಬಾಂಕ್ ಶಾಖೆಗಳ ಹೆಸರು ಮತ್ತು ಐಎಫ್‌ಎಸ್‌ಸಿ ಕೋಡ್ ಅನ್ನು ಎಸ್‌ಬಿಐ ಬದಲಾಯಿಸಿದೆ. 

ನವದೆಹಲಿ: 6 ಸಹವರ್ತಿ ಬ್ಯಾಂಕುಗಳ ವಿಲೀನ ವನ್ನು ತರ್ಕಬದ್ಧಗೊಳಿಸುವ ಭಾಗವಾಗಿ ದೇಶದ ಸುಮಾರು 1,300 ಬಾಂಕ್ ಶಾಖೆಗಳ ಹೆಸರು ಮತ್ತು ಐಎಫ್‌ಎಸ್‌ಸಿ ಕೋಡ್ ಅನ್ನು ಎಸ್‌ಬಿಐ ಬದಲಾಯಿಸಿದೆ.

2017 ರ ಏ.1ರಂದು ಸ್ಟೇಟ್ ಬ್ಯಾಂಕ್ ಆಫ್ ಮೈಸೂರು ಸೇರಿದಂತೆ 6 ಬ್ಯಾಂಕ್ ಗಳನ್ನು ಎಸ್‌ಬಿಐನಲ್ಲಿ ವಿಲೀನಗೊಳಿಸಲಾಗಿತ್ತು.

ಈ ಮೂಲಕ ಎಸ್‌ಬಿಐ 22,428 ಶಾಖೆಗಳನ್ನು ಹೊಂದಿದೆ. ಅವುಗಳ ಪೈಕಿ 1,295 ಬ್ಯಾಂಕ್ ಶಾಖೆಗಳ ಹೆಸರನ್ನು ಬದಲಾಯಿಸಲಾಗಿದೆ. 

ಅವುಗಳಿಗೆ ಹೊಸ ಐಎಫ್‌ಎಸ್‌ಸಿ ಕೋಡ್‌ಗಳನ್ನು ನೀಡಲಾಗಿದೆ. ಹೊಸ ಶಾಖೆಗಳ ಕೋಡ್‌ಗಳನ್ನು ಎಸ್‌ಬಿಐನ ವೆಬ್‌ಸೈಟ್‌ನಲ್ಲಿ ಪ್ರಕಟಿಸಲಾಗಿದೆ.