ಸೌದಿ ಅರೇಬಿಯಾದ ಆಡಳಿತದಿಂದ ನಿರ್ಗಮಿಸಲು ಮುಂದಾಗಿರುವ ರಾಜ ಸಲ್ಮಾನ್ (81) ಅವರು ತಮ್ಮ ಪುತ್ರ ಮೊಹಮ್ಮದ್ ಬಿನ್ ಸಲ್ಮಾನ್ ಅವರಿಗೆ ಮುಂದಿನ ವಾರ ಪಟ್ಟ ಕಟ್ಟಲು ಚಿಂತನೆ ನಡೆಸಿದ್ದಾರೆ ಎಂಬ ಮಾಹಿತಿ ಹೊರಬಿದ್ದಿದೆ.

ಲಂಡನ್: ಸೌದಿ ಅರೇಬಿಯಾದ ಆಡಳಿತದಿಂದ ನಿರ್ಗಮಿಸಲು ಮುಂದಾಗಿರುವ ರಾಜ ಸಲ್ಮಾನ್ (81) ಅವರು ತಮ್ಮ ಪುತ್ರ ಮೊಹಮ್ಮದ್ ಬಿನ್ ಸಲ್ಮಾನ್ ಅವರಿಗೆ ಮುಂದಿನ ವಾರ ಪಟ್ಟ ಕಟ್ಟಲು ಚಿಂತನೆ ನಡೆಸಿದ್ದಾರೆ ಎಂಬ ಮಾಹಿತಿ ಹೊರಬಿದ್ದಿದೆ.

ಇದರಿಂದಾಗಿ 64 ವರ್ಷ ನಂತರ ಇದೇ ಮೊದಲ ಬಾರಿ ಮುಂದಿನ ಪೀಳಿಗೆಗೆ ಅಧಿಕಾರ ಹಸ್ತಾಂತರವಾಗುತ್ತಿದೆ. ಇದಕ್ಕೂ ಮುನ್ನ 1953ರಲ್ಲಿ ನಿಧನರಾದ ರಾಜ ಅಬ್ದುಲ್ಲಾಜೀಜ್‌ನ 6 ಮಕ್ಕಳೇ ರಾಜರಾಗಿದ್ದರು.

ಭ್ರಷ್ಟಾಚಾರ ಆರೋಪದ ಮೇರೆಗೆ 40 ರಾಜವಂಶಜರನ್ನು ಬಂಧಿಸುವಂತೆ ಆದೇಶಿಸಿದ್ದ ಬೆನ್ನಲ್ಲೇ, ಸಲ್ಮಾನ್ ಆಡಳಿತದಿಂದ ನಿರ್ಗಮಿಸಲು ಮುಂದಾಗಿದ್ದಾರೆ.