Asianet Suvarna News Asianet Suvarna News

ಹಜ್ ಯಾತ್ರೆ ಇನ್ನು ಮುಂದೆ ಭಾರೀ ಅಗ್ಗ

ಹಜ್ ಯಾತ್ರಿಕರಿಗೆ ಹಡಗು ಸೇವೆಯನ್ನು ಪುನಾರಂಭಿಸುವ ಕುರಿತು ಕೇಂದ್ರ ಅಲ್ಪ ಸಂಖ್ಯಾತ ಸಚಿವಾಲಯದ ಬೇಡಿಕೆಗೆ ಸೌದಿ ಅರೇಬಿಯಾ ಒಪ್ಪಿಗೆ ಸೂಚಿಸಿದೆ. 

Saudi Arabia revives historic sea route for Hajj pilgrims from India

ಮಲಪ್ಪುರಂ: ಹಜ್ ಯಾತ್ರಿಕರಿಗೆ ಹಡಗು ಸೇವೆಯನ್ನು ಪುನಾರಂಭಿಸುವ ಕುರಿತು ಕೇಂದ್ರ ಅಲ್ಪ ಸಂಖ್ಯಾತ ಸಚಿವಾಲಯದ ಬೇಡಿಕೆಗೆ ಸೌದಿ ಅರೇಬಿಯಾ ಒಪ್ಪಿಗೆ ಸೂಚಿಸಿದೆ. 

ಇದರಿಂದಾಗಿ ಪ್ರಯಾಣ ವೆಚ್ಚ ಭಾರೀ ಪ್ರಮಾಣದಲ್ಲಿ ಇಳಿಕೆಯಾಗಲಿದೆ. ಇದುವರೆಗೆ ವಿಮಾನದ ಮೂಲಕ ಹಜ್ ಯಾತ್ರೆ ಕೈಗೊಳ್ಳಲು 80,000 ರು. ನೀಡಬೇಕಿತ್ತು. ಆದರೆ, ಹಡಗಿನ ಮೂಲಕ ಯಾತ್ರೆ ಕೈಗೊಂಡರೆ ಪ್ರಯಾಣ ದರ 15,000ರು. ನಿಂದ 20,000 ರು.
ಗೆ ಇಳಿಕೆಯಾಗಲಿದೆ. 

ಜೊತೆಗೆ ಹಜ್ ಯಾತ್ರಿಕರು ಸಮುದ್ರಯಾನದ ಅನುಭವವನ್ನೂ ಪಡೆಯಬಹುದಾಗಿದೆ. ಭಾರತ ಮತ್ತು ಸೌದಿ ಅರೇಬಿಯಾ ಮಧ್ಯೆ ಹಜ್ 2018ರ ಒಪ್ಪಂದದ ವೇಳೆ ಸಮುದ್ರಯಾನವನ್ನು ಪುನರಾರಂಭಿಸುವ ಕುರಿತು ನಿರ್ಧಾರ ಕೈಗೊಳ್ಳಲಾಗಿತ್ತು.

ಭಾರತದಿಂದ ಸೌದಿ ಅರೇಬಿಯಾಕ್ಕೆ ಹಡಗು ಪ್ರಯಾಣ ಆರಂಭಿಸುವ ಬಗ್ಗೆ ಆಸಕ್ತಿ ಇರುವ ಕಂಪನಿಗಳಿಂದ ಹಜ್ ಸಮಿತಿ ಈಗಾಗಲೇ ಟೆಂಡರ್ ಆಹ್ವಾನಿಸಿದೆ. 2019ರಿಂದ ಹಜ್‌ಯಾತ್ರಿಕರಿಗೆ ಹಡಗು ಸೇವೆ ಆರಂಭಗೊಳ್ಳುವ ನಿರೀಕ್ಷೆ ಇದೆ.

Follow Us:
Download App:
  • android
  • ios