ಸೌದಿ ಅರೇಬಿಯಾದಲ್ಲಿ ಅನೇಕ ಸುಧಾರಣೆಗಳನ್ನು ತರಲಾಗುತ್ತಿದ್ದು, ಇದೀಗ ಈ ಸಾಲಿಗೆ ಮತ್ತೊಂದು  ಹೊಸ ಸೇರ್ಪಡೆಯಾಗುತ್ತಿದೆ. ಅದೇನೆಂದರೆ ಇಲ್ಲಿ ಕಳೆದ 37 ವರ್ಷಗಳಿಂದ ಇದ್ದ ಸಿನಿಮಾ ಮೇಲಿನ ನಿಷೇಧವನ್ನು ವಾಪಸ್ ಪಡೆದಿದ್ದಾರೆ.

ಸೌದಿ ಅರೇಬಿಯಾ (ಡಿ.11): ಸೌದಿ ಅರೇಬಿಯಾದಲ್ಲಿ ಅನೇಕ ಸುಧಾರಣೆಗಳನ್ನು ತರಲಾಗುತ್ತಿದ್ದು, ಇದೀಗ ಈ ಸಾಲಿಗೆ ಮತ್ತೊಂದು ಹೊಸ ಸೇರ್ಪಡೆಯಾಗುತ್ತಿದೆ. ಅದೇನೆಂದರೆ ಇಲ್ಲಿ ಕಳೆದ 37 ವರ್ಷಗಳಿಂದ ಇದ್ದ ಸಿನಿಮಾ ಮೇಲಿನ ನಿಷೇಧವನ್ನು ವಾಪಸ್ ಪಡೆದಿದ್ದಾರೆ. ಈ ನಿಟ್ಟಿನಲ್ಲಿ ಮುಂದಿನ ಮಾರ್ಚ್’ನಿಂದ ಇಲ್ಲಿ ಸಿನಿಮಾ ಪ್ರದರ್ಶನ ಆರಂಭವಾಗಲಿದೆ.

ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿgooglePreferred

ಅಲ್ಲದೇ ಇಲ್ಲಿ ಹೊಸ ಚಿತ್ರಮಂದಿರಗಳಿಗೆ ಲೈಸೆನ್ಸ್ ಕೂಡ ನೀಡಲಾಗುತ್ತಿದೆ. 1980ರಲ್ಲಿ ಇಲ್ಲಿ ಸಿನಿಮಾಗಳಿಂದ ಧಾರ್ಮಿಕ ಹಾಗೂ ಸಾಂಸ್ಕೃತಿಕತೆಗೆ ಸಮಸ್ಯೆಯಾಗುತ್ತದೆ ಎನ್ನುವ ಕಾರಣಕ್ಕಾಗಿ ನಿಷೇಧ ಹೇರಲಾಗಿತ್ತು.

ಇದೀಗ ಇಲ್ಲಿನ ದೊರೆ ಮೊಹಮ್ಮದ್ ಬಿನ್ ಸಲ್ಮಾನ್ ಅವರು ವಿಷನ್ 2030ರ ಭಾಗವಾಗಿ ಚಿತ್ರಮಂದಿರಗಳನ್ನು ಸುಧಾರಿಸುವುದು ಹಾಗೂ ಮನೊರಂಜನೆಗೆ ಉತ್ತೇಜನ ನೀಡಿ ಸಮಗ್ರ ಬದಲಾವಣೆ ತರುವ ಯತ್ನ ಮಾಡುತ್ತಿದ್ದಾರೆ.