ಪರಪ್ಪನ ಅಗ್ರಹಾರ ಜೈಲಿನಲ್ಲಿ ಶಶಿಕಲಾಗೆ ಸಕಲ ಸೌಕರ್ಯ ನೀಡುತ್ತಿರುವ ಆರೋಪದಿಂದ ಸಾಕಷ್ಟು ವಿವಾದ ಸೃಷ್ಟಿಯಾಗಿತ್ತು. ಇದರ ಬೆನ್ನಲ್ಲೇ ಇದೀಗ ಬಿಡುಗಡೆಯಾದ ಸಿಸಿಟಿವಿ ದೃಶ್ಯಾವಳಿಗಳು ಪರಪ್ಪನ ಅಗ್ರಹಾರ ಜೈಲಿನಿಂದ ಹೊರಹೋಗಿದ್ದರಾ ಎಂಬ ಅನುಮಾನ ಉದ್ಭವಿಸುವಂತೆ ಮಾಡಿವೆ.

ಬೆಂಗಳೂರು(ಆ.21): ಪರಪ್ಪನ ಅಗ್ರಹಾರ ಜೈಲಿನಲ್ಲಿ ಶಶಿಕಲಾಗೆ ಸಕಲ ಸೌಕರ್ಯ ನೀಡುತ್ತಿರುವ ಆರೋಪದಿಂದ ಸಾಕಷ್ಟು ವಿವಾದ ಸೃಷ್ಟಿಯಾಗಿತ್ತು. ಇದರ ಬೆನ್ನಲ್ಲೇ ಇದೀಗ ಬಿಡುಗಡೆಯಾದ ಸಿಸಿಟಿವಿ ದೃಶ್ಯಾವಳಿಗಳು ಪರಪ್ಪನ ಅಗ್ರಹಾರ ಜೈಲಿನಿಂದ ಹೊರಹೋಗಿದ್ದರಾ ಎಂಬ ಅನುಮಾನ ಉದ್ಭವಿಸುವಂತೆ ಮಾಡಿವೆ.

ಶಶಿಕಲಾ ಜೈಲಿನ ಹೊರಗಿನಿಂದ ಒಳಬರುವ ದೃಶ್ಯ ಸಿಸಿಟಿವಿಯಲ್ಲಿ ಸೆರೆಯಾಗಿದೆ. ಇದರಿಂದಾಗಿ ಶಶಿಕಲಾ ಜೈಲಿನಿಂದ ಹೊರಹೋಗುತ್ತಿದ್ದರಾ ಎಂಬ ಪ್ರಶ್ನೆ ಇದರಿಂದ ಉದ್ಭವಿಸಿದೆ. ಡಿಜಿಪಿ ಆರ್. ಕೆ ದತ್ತಾಗೆ, ಡಿಐಜಿ ರೂಪಾ ಈ ಸಿಸಿಟಿವಿ ದೃಶ್ಯಾವಳಿಗಳನ್ನು ಹಸ್ತಾಂತರಿಸಿದ್ದಾರೆ.

ಈ ದೃಶ್ಯಾವಳಿಗಳಲ್ಲಿ ಮೊದಲು ಅಧೀಕ್ಷಕಿ ಅನಿತಾ ಜೈಲಿನ ಒಳಗೆ ಬರುತ್ತಿದ್ದು, ಅವರ ಹಿಂದೆ ಶಶಕಲಾ ಆಗಮಿಸಿದ್ದಾರೆ. ಜೈಲಿನ ಕೈದಿಗಳಿಗಿಂತ ಇವರಿಗೆ ವಿಐಪಿ ಸೌಲಭ್ಯ ನೀಡಲಾಗುತ್ತಿದೆ ಎಂಬ ಆರೋಪಕ್ಕೆ ಮತ್ತೊಂದು ಸಾಕ್ಷಿ ಸಿಕ್ಕಂತಾಗಿದೆ.