ಬೆಂಗಳೂರು (ಫೆ.15): ಪರಪ್ಪನ ಅಗ್ರಹಾರ ತಲುಪಿದ ಶಶಿಕಲಾ ನಟರಾಜನ್​ ವಿಶೇಷ ನ್ಯಾಯಾಲಯದ ಎದುರು ಶರಣಾಗಿದ್ದಾರೆ. ಶಶಿಕಲಾ ಜತೆ ಇಳವರಸಿ, ಸುಧಾಕರನ್​ ಸಹ ಕೋರ್ಟ್​ಗೆ ಶರಣಾಗಿದ್ದಾರೆ.

ಬೆಂಗಳೂರು (ಫೆ.15): ಪರಪ್ಪನ ಅಗ್ರಹಾರ ತಲುಪಿದ ಶಶಿಕಲಾ ನಟರಾಜನ್​ ವಿಶೇಷ ನ್ಯಾಯಾಲಯದ ಎದುರು ಶರಣಾಗಿದ್ದಾರೆ. ಶಶಿಕಲಾ ಜತೆ ಇಳವರಸಿ, ಸುಧಾಕರನ್​ ಸಹ ಕೋರ್ಟ್​ಗೆ ಶರಣಾಗಿದ್ದಾರೆ.

ಸುಪ್ರೀಂಕೋರ್ಟ್ ಆದೇಶದ ಹಿನ್ನೆಲೆಯಲ್ಲಿ ಜಡ್ಜ್​ ಅಶ್ವತ್ಥನಾರಾಯಣ ಎದುರು ಶಶಿಕಲಾ ಶರಣಾಗಿದ್ದು ಕೋರ್ಟ್​ ನಿಯಮಾವಳಿ ಪೂರೈಸಿದ ಬಳಿಕ ಜೈಲು ಪಾಲಾಗಲಿದ್ದಾರೆ.

ಈ ವೇಳೆ ನ್ಯಾಯಾಧೀಶರ ಬಳಿ ಅನಾರೋಗ್ಯದ ನೆಪ ಮುಂದಿಟ್ಟುಕೊಂಡು ಎರಡು ವಾರ ಕಾಲಾವಕಾಶ ಕೋರಲು ಶಶಿಕಲಾ ಪ್ಲಾನ್ ಮಾಡಿದ್ದಾರೆ ಎನ್ನಲಾಗಿದೆ. ಆದರೆ ಕಾಲಾವಕಾಶ ನೀಡುವ ಸಾಧ್ಯತೆ ಇಲ್ಲ.

ಆಗ್ನೇಯ ವಿಭಾಗ ಡಿಸಿಪಿ ಬೋರಲಿಂಗಯ್ಯ ನೇತೃತ್ವದಲ್ಲಿ ಜೈಲು ಸುತ್ತ ಬಿಗಿ ಭದ್ರತೆ ಒದಗಿಸಲಾಗಿದೆ. ಶಶಿಕಲಾ ಮತ್ತು ಇಳವರಸಿಗೆ ಮಹಿಳಾ ಕಾರಾಗೃಹದ ವಾರ್ಡ್ ನಲ್ಲಿ ಸಿದ್ಧತೆ ಪೂರ್ಣಗೊಂಡಿದೆ. ಮಾಜಿ ಸಿಎಂ ಜಯಲಲಿತಾ ಹಿಂದೊಮ್ಮೆ ಇದ್ದ ಕೊಠಡಿಯಲ್ಲೇ ಶಶಿಕಲಾರನ್ನು ಇಡುವ ಸಾಧ್ಯತೆಯಿದೆ. ಆದರೆ ವಿಶೇಷ ಭದ್ರತೆ ನೀಡಲಾಗುವುದಿಲ್ಲ.