ಕ್ಷಣ ಕ್ಷಣಕ್ಕೂ ತಮಿಳುನಾಡಿನ ಚುನಾವಣಾ ಅಖಾಡ ರಂಗೇರುತ್ತಲೇ ಇದೆ. ಸಿಎಂ ಗದ್ದುಗೆ ಏರುವುದು ನಾನಾ-ನೀನಾ ಎನ್ನುತ್ತಿದ್ದ ಚಿನ್ನಮ್ಮ, ಸೈಲೆಂಟಾಗಿ ಸೈಡಿಗೆ ಹೋಗುವ ಸೂಚನೆ ಸಿಕ್ಕಿದೆ. ಇತ್ತ ಪನ್ನೀರ್ ಸೆಲ್ವಂಗೆ ಶಾಸಕರಿಂದ ಭಾರೀ ಬೆಂಬಲ ವ್ಯಕ್ತವಾಗುತ್ತಿದೆ. ಈ ನಡುವೆ ಶಶಿಕಲಾ ಅಧಿಕಾರದ ಆಸೆಗೆ ರಾಜ್ಯಪಾಲರನ್ನೇ ದೂರಿದ್ದಾರೆ.
ಚೆನ್ನೈ(ಫೆ.12): ಕ್ಷಣ ಕ್ಷಣಕ್ಕೂ ತಮಿಳುನಾಡಿನ ಚುನಾವಣಾ ಅಖಾಡ ರಂಗೇರುತ್ತಲೇ ಇದೆ. ಸಿಎಂ ಗದ್ದುಗೆ ಏರುವುದು ನಾನಾ-ನೀನಾ ಎನ್ನುತ್ತಿದ್ದ ಚಿನ್ನಮ್ಮ, ಸೈಲೆಂಟಾಗಿ ಸೈಡಿಗೆ ಹೋಗುವ ಸೂಚನೆ ಸಿಕ್ಕಿದೆ. ಇತ್ತ ಪನ್ನೀರ್ ಸೆಲ್ವಂಗೆ ಶಾಸಕರಿಂದ ಭಾರೀ ಬೆಂಬಲ ವ್ಯಕ್ತವಾಗುತ್ತಿದೆ. ಈ ನಡುವೆ ಶಶಿಕಲಾ ಅಧಿಕಾರದ ಆಸೆಗೆ ರಾಜ್ಯಪಾಲರನ್ನೇ ದೂರಿದ್ದಾರೆ.
ಶಶಿಕಲಾ ಬೆಂಬಲಿಗರು ಪನ್ನೀರ್ ಪಾಲು!: ರಾಜ್ಯಪಾಲರಿಂದ ಚಿನ್ನಮ್ಮಗೆ ಬಿಗ್ ಶಾಕ್
ತಮಿಳರ ಪುರಚ್ಚಿ ತಲೈವಿ ಕಣ್ಮರೆ ಆಗುತ್ತಿದ್ದಂತೆಯೇ ತಮಿಳುನಾಡಿನ ರಾಜಕೀಯದಲ್ಲಿ ಅಲ್ಲೋಲ ಕಲ್ಲೋಲವಾಗಿದೆ. ಗದ್ದುಗೆ ಗುದ್ದಾಟದಲ್ಲಿ ರೆಸಾರ್ಟ್ ರಾಜಕಾರಣ ಮಾಡಿ, ಶಾಸಕರನ್ನ ಹಿಡಿದಿಟ್ಟುಕೊಳ್ಳಬೇಕು ಅಂತಿದ್ದ ಚಿನ್ನಮ್ಮಗೆ ಹೈ ವೋಲ್ಟೇಜ್ ಶಾಕ್ ಸಿಕ್ಕಿದೆ. ಅಮ್ಮನ ಬಣದಲ್ಲಿದ್ದ 65 ಶಾಸಕರು, ನಿಷ್ಠೆ ಬದಲಿಸಿ ಪನ್ನೀರ್ ಗೆ ಬೆಂಬಲ ಸೂಚಿಸಿದ್ದಾರೆ. ಜೊತೆಗೆ ಅಕ್ರಮ ಆಸ್ತಿ ಪ್ರಕರಣದ ತೀರ್ಪು ಹೊರಬರುವ ವರೆಗೂ ಕಾಯಬೇಕು ಅಂತ ರಾಜ್ಯಪಾಲ ವಿದ್ಯಾಸಾಗರ್ ಚಿನ್ನಮ್ಮಗೆ ಬಿಗ್ ಶಾಕ್ ನೀಡಿದ್ದಾರೆ.
ಅಮ್ಮನ ಭಂಟನಿಗೆ ಮತ್ತಷ್ಟು ಬಲ: ಪನ್ನೀರ್ ಹವಾಗೆ ಶಶಿಕಲಾ ವಿಲವಿಲ
ಎಐಎಡಿಎಂಕೆ ಸಂಸ್ಥಾಪಕ ಪೊನ್ನಯನ್ ಕೂಡ ಪನ್ನೀರ್'ಗೆ ಬೆಂಬಲ ಸೂಚಿಸಿದ್ದು, ಪಾಂಡ್ಯರಾಜನ್, ಸುಂದರಂ ಸೇರಿದಂತೆ ಹಲವು ಶಾಸಕ ಮತ್ತು ಸಚಿವರು ಪನ್ನೀರ್ ಸೆಲ್ಂ ಗೆ ಜೈ ಎಂದಿದ್ದಾರೆ. ಅಚ್ಚರಿ ವಿಷ್ಯ ಅಂತಂದ್ರೆ ಆಲ್ ಇಂಡಿಯಾ ಸಮುಥವಾ ಮಕ್ಕಳ್ ಕಚ್ಚಿ ಪಕ್ಷದ ನಟ ಶರತ್ಕುಮಾರ್ ಕೂಡ ಸಿಎಂ ಆಗಿ ಪನ್ನೀರ್ ಮುಂದುವರಿಬೇಕು ಅಂತ ಬ್ಯಾಟ್ ಬೀಸಿದ್ದಾರೆ. ಇದರಿಂದಾಗಿ ಪನ್ನೀರ್ ಸೆಲ್ವಂ ಬಲ ಮತ್ತಷ್ಟು ಹೆಚ್ಚಿದಂತಾಗಿದೆ.
ಸಿಎಂ ರೇಸ್‌ನಿಂದ ಶಶಿಕಲಾ ಹಿಂದಕ್ಕೆ?
ಇನ್ನೂ ದಿನದಿಂದ ದಿನಕ್ಕೆ ಚಿನ್ನಮ್ಮನ ಗ್ಯಾಂಗ್ ಕರಗಿ ನೀರಾಗುತ್ತಿದ್ದಾರೆ. ಒಬ್ಬೊಬ್ಬರಾಗಿ ಚಿನ್ನಮ್ಮನ ಬೆಂಬಲಿಗರು ಪನ್ನೀರ್ ಬಳಗ ಸೇರುತ್ತಿದ್ದಾರೆ. ನನಗೆ ಸಿಎಂ ಸ್ಥಾನ ಒಲಿಯದಿದ್ದರೂ ಪರವಾಗಿಲ್ಲ. ಆಪ್ತ ಸಂಗೊಟ್ಟಿಯನ್ ಅವರನ್ನಾದರೂ ಸಿಎಂ ಮಾಡಿ, ಕಿಂಗ್ ಮೇಕರ್ ಆಗೋಣ ಅಂತ ಚಿನ್ನಮ್ಮ ನಿರ್ಧರಿಸಿದ್ದಾರೆ ಅಂತ ಉನ್ನತ ಮೂಲಗಳು ತಿಳಿಸಿವೆ.
ಪಕ್ಷ ಇಬ್ಭಾಗಮಾಡಲು ರಾಜ್ಯಪಾಲರಿಂದ ಯತ್ನ : ವಿದ್ಯಾಸಾಗರ್ ರಾವ್ ವಿರುದ್ಧ ಶಶಿಕಲಾ ವಾಗ್ದಾಳಿ
ಬೀಚ್ ರೆಸಾರ್ಟ್'ನಲ್ಲಿ ಶಾಸಕರನ್ನು ಭೇಟಿಯಾಗಿ ಬಂದ ಚಿನ್ನಮ್ಮ ರಾಜ್ಯಪಾಲರ ನಡೆಗೆ ಗರಂ ಆಗಿದ್ದಾರೆ. ಸರಕಾರ ರಚಿಸಲು ಆಹ್ವಾನ ನೀಡದೇಹೋದರೆ ಏನು ಮಾಡಬೇಕೋ ಅದನ್ನು ಮಾಡೇ ಮಾಡುತ್ತೇವೆ ಎಂದು ಪರೋಕ್ಷವಾಗಿ ಧಮ್ಮಿ ಹಾಕಿದ್ದಾರೆ. ರಾಜಭವನದ ಎದುರು ಪ್ರತಿಭಟನೆ ನಡೆಸುವುದಾಗಿ ಸವಾಲು ಹಾಕಿದ್ದಾರೆ.
ಒಟ್ಟಿನಲ್ಲಿ ಸಿಎಂ ಗಾದಿ ಫೈಟ್ ನಲ್ಲಿ ಗೆಲ್ಲಲೇಬೇಕೆಂದುಕೊಂಡಿರುವ ಶಶಿಕಲಾ ಗೆ ಜಯ ಸಿಗುತ್ತಾ? ಅಥವಾ ಸೋತು ಸುಣ್ಣವಾಗುತ್ತಾರಾ ಎಂಬುದು ಶೀಘ್ರದಲ್ಲೇ ತಿಳಿಯಲಿದೆ.
