ಪತಿ ನಟರಾಜನ್ ಸಾವು ಹಿನ್ನಲೆಯಲ್ಲಿ  ಶಶಿಕಲಾ ಪೆರೋಲ್’ಗೆ ಅರ್ಜಿ ಸಲ್ಲಿಸಿದ್ದಾರೆ. 

ಬೆಂಗಳೂರು (ಮಾ. 20): ಪತಿ ನಟರಾಜನ್ ಸಾವು ಹಿನ್ನಲೆಯಲ್ಲಿ ಶಶಿಕಲಾ ಪೆರೋಲ್’ಗೆ ಅರ್ಜಿ ಸಲ್ಲಿಸಿದ್ದಾರೆ. 

ಬಹು ಅಂಗಾಂಗ ವೈಫಲ್ಯ ಹಾಗೂ ಕಿಡ್ನಿ ಸಮಸ್ಯೆಯಿಂದ ಬಳಲುತ್ತಿದ್ದ ನಟರಾಜ್ ಕಳೆದ ರಾತ್ರಿ ಒಂದು ಗಂಟೆ ಸಮಯದಲ್ಲಿ ನಿಧನರಾಗಿದ್ದರು. ಪತಿಯ ಅಂತ್ಯ ಸಂಸ್ಕಾರದಲ್ಲಿ ಭಾಗವಹಿಸಿಲು ಹದಿನೈದು ದಿನಗಳ ಪೆರೋಲ್’ಗೆ ಶಶಿಕಲಾ ಅರ್ಜಿ ಸಲ್ಲಿಸಿದ್ದಾರೆ. ಹನ್ನೆರಡು ಗಂಟೆಯೊಳಗೆ ಪೆರೋಲ್ ಮೇಲೆ ಬಿಡುಗಡೆಯಾಗುವ ಸಾದ್ಯತೆಯಿದೆ. ಶಶಿಕಲಾ ಪರ ವಕೀಲ ಸುರೇಶ್ ಪ್ರಭು, ಅಶೋಕನ್ ಜೈಲು ಅಧಿಕಾರಿಗಳೊಂದಿಗೆ ಚರ್ಚೆ ನಡೆಸಿದ್ದಾರೆ.