ಎಲೆಕ್ಷನ್ ಇಲ್ಲ, ಪ್ರಚಾರ ಇಲ್ಲ, ಚುನಾವಣೆಯೂ ಇಲ್ಲ. ಆದರೂ ಮುಂದಿನ ಮುಖ್ಯಮಂತ್ರಿ ಶಶಿಕಲಾ ನಟರಾಜನ್. ಇಂದು ಬೆಳಗ್ಗೆ 11 ಗಂಟೆಗೆ ಶಶಿಕಲಾ ನಟರಾಜನ್ ತಮಿಳುನಾಡಿನ ಸಿಎಂ ಆಗಿ ಪ್ರಮಾಣ ವಚನ ಸ್ವೀಕರಿಸೋ ಸಾಧ್ಯತೆ ಇದೆ. ಆದರೆ ಚಿನ್ನಮ್ಮ ರಾಜಮಾತೆಯಾಗಿ ಅಧಿಕಾರದ ಚುಕ್ಕಾಣಿ ಹಿಡಿಯುವುದು ಅಷ್ಟು ಸುಲಭವಾಗಿ ಉಳಿದಿಲ್ಲ. ಕಾರಣ ಶಶಿಕಲಾ ವಿರುದ್ದ ಸದ್ದು ಮಾಡಿರುವ ಅಕ್ರಮ ಆಸ್ತಿ ಹಗರಣ. ಈ ಕುರಿತಾದ ಒಂದು ವರದಿ.
ಚೆನ್ನೈ(ಫೆ.07): ಎಲೆಕ್ಷನ್ ಇಲ್ಲ, ಪ್ರಚಾರ ಇಲ್ಲ, ಚುನಾವಣೆಯೂ ಇಲ್ಲ. ಆದರೂ ಮುಂದಿನ ಮುಖ್ಯಮಂತ್ರಿ ಶಶಿಕಲಾ ನಟರಾಜನ್. ಇಂದು ಬೆಳಗ್ಗೆ 11 ಗಂಟೆಗೆ ಶಶಿಕಲಾ ನಟರಾಜನ್ ತಮಿಳುನಾಡಿನ ಸಿಎಂ ಆಗಿ ಪ್ರಮಾಣ ವಚನ ಸ್ವೀಕರಿಸೋ ಸಾಧ್ಯತೆ ಇದೆ. ಆದರೆ ಚಿನ್ನಮ್ಮ ರಾಜಮಾತೆಯಾಗಿ ಅಧಿಕಾರದ ಚುಕ್ಕಾಣಿ ಹಿಡಿಯುವುದು ಅಷ್ಟು ಸುಲಭವಾಗಿ ಉಳಿದಿಲ್ಲ. ಕಾರಣ ಶಶಿಕಲಾ ವಿರುದ್ದ ಸದ್ದು ಮಾಡಿರುವ ಅಕ್ರಮ ಆಸ್ತಿ ಹಗರಣ. ಈ ಕುರಿತಾದ ಒಂದು ವರದಿ.
ತಮಿಳುನಾಡಿನಲ್ಲಿ ಶುರುವಾಗಲಿದೆಯಾ ಚಿನ್ನಮ್ಮ ದರ್ಬಾರ್!: ಇಂದು ಸಿಎಂ ಆಗಿ ಪ್ರಮಾಣ ವಚನ ಸ್ವೀಕರಿಸುತ್ತಾರಾ ಶಶಿಕಲಾ?
ತಮಿಳುನಾಡಿನ ಅಮ್ಮ ಜಯಲಲಿತಾ ನಿಧನರಾದ ಎರಡೇ ತಿಂಗಳಿಗೆ ಶಶಿಕಲಾ ನಟರಾಜನ್ ಸಿಎಂ ಗಾದಿಗೇರುವ ಹಾದಿಯನ್ನು ಸುಸೂತ್ರ ಮಾಡಿಕೊಂಡಿದ್ದಾರೆ. ಇಂದು ಬೆಳಗ್ಗೆ 11 ಗಂಟೆಗೆ ಜಯಲಲಿತಾ ಅಧಿಕಾರ ಸ್ವೀಕರಿಸಿದ ಸ್ಥಳದಲ್ಲೇ ಶಶಿಕಲಾ ನಟರಾಜನ್ ಸಿಎಂ ಆಗಿ ಪ್ರಮಾಣ ವಚನ ಸ್ವೀಕರಿಸುವ ಸಾಧ್ಯತೆ ಇದೆ. ಆದ್ರೆ ಆ ಹಾದಿಗೆ ನೂರೆಂಟು ವಿಘ್ನಗಳು ಎದುರಾಗಿವೆ. ಅಮ್ಮನ ಹೆಸರನ್ನೇ ದಾಳವನ್ನಾಗಿಸಿಕೊಂಡು ಅಧಿಕಾರದ ಪಟ್ಟವನ್ನೇರುತ್ತಿರುವ ಚಿನ್ನಮ್ಮನಿಗೆ, ಕಂಟಕಗಳ ಸರಮಾಲೆ ಆರಂಭವಾಗಿದೆ. ಚಿನ್ನಮ್ಮ ಪಟ್ಟಕ್ಕೆ ಏರೋಕು ಮುಂಚೆಯೇ ಸುದ್ದಿಯಿಲ್ಲದೇ ಮಲಗಿದ್ದ ಅಕ್ರಮ ಆಸ್ತಿ ಹಗರಣ ಸದ್ದು ಮಾಡೋಕೆ
66.66 ಕೋಟಿ ಅಕ್ರಮ ಆಸ್ತಿ ಹಗರಣದ ತೂಗು ಗತ್ತಿ..!: ಅಪರಾಧ ಸಾಬೀತಾದರೆ ಚಿನ್ನಮ್ಮ ಜೈಲು ಪಾಲು !
ಜಯಲಲಿತಾ, ಸೇರಿದಂತೆ ಶಶಿಕಲಾ, ಪುತ್ರ ಸುಧಾಕರನ್ ಮತ್ತು ಇಳವರಸಿ ನಾಲ್ವರ ಮೇಲೂ 66.65 ಕೋಟಿ ಮೌಲ್ಯದ ಅಕ್ರಮ ಆಸ್ತಿ ಗಳಿಕೆ ಹಗರಣದ ಆರೋಪವಿತ್ತು. ಇದೀಗ ಪ್ರಕರಣ ಸಂಬಂಧ ಸುಪ್ರೀಂ ಕೋರ್ಟ್ ಮುಂದಿನ ವಾರ ತೀರ್ಪು ನೀಡೋದಾಗಿ ತಿಳಿಸಿದೆ. ಒಂದು ಪಕ್ಷ ತೀರ್ಪು ಚಿನ್ನಮ್ಮ ವಿರುದ್ದ ಬಂದರೆ ಶಶಿಕಲಾ ಜೈಲು ಪಾಲಾಗುವುದು ಖಂಡಿತ.
ಸಿಂಹಾಸನಕ್ಕೂ ಮೊದಲೇ ಸಂಕಷ್ಟಗಳ ಸರಮಾಲೆ: ಪ್ರಮಾಣವಚನಕ್ಕೆ ತಡೆ ಕೋರಿ ಕೋರ್ಟ್ಗೆ ಮನವಿ
ಇನ್ನು ಶಶಿಕಲಾ ನಿನ್ನೆ ಸಿಎಂ ಸ್ಥಾನಕ್ಕೆ ಆಯ್ಕೆಯಾದ ಬೆನ್ನಲ್ಲೇ ಒಂದೆಡೆ ಆಕೆ ಪತಿ ನಟರಾಜನ್ ಆಸ್ಪತ್ರೆ ಸೇರಿದ್ರೆ. ಇನ್ನೊಂದೆಡೆ ವಿರೋಧ ಪಕ್ಷಗಳು ಆಕೆ ವಿರುದ್ಧ ಧ್ವನಿ ಎತ್ತಿವೆ. ಶಶಿಕಲಾ ಗದ್ದುಗೆ ಏರಿದರೆ ರಾಜಕೀಯ ವ್ಯವಸ್ಥೆ ಹದಗೆಡುತ್ತೆ ಅಂತಾ ಶಶಿಕಲಾ ಪುಷ್ಪ, ಪ್ರಧಾನಿ ಮೋದಿಗೆ ಪತ್ರ ಬರೆದಿದ್ರೆ, ಪ್ರಮಾಣವಚನಕ್ಕೆ ತಡೆಕೋರಿ ವಿರೋಧ ಪಕ್ಷದವರು ಸುಪ್ರೀಂ ಕೋರ್ಟ್ ಮೊರೆಹೋಗಿದ್ದಾರೆ. ಹಾಗೇ ರಾಜ್ಯ ಸಭಾ ಸದಸ್ಯ ಸುಬ್ರಹ್ಮಣ್ಯಂ ಸ್ವಾಮಿ ಕೂಡ ಶಶಿಕಲಾ ಸಿಎಂ ಆಗುವುದಕ್ಕೆ ವಿರೋದ ವ್ಯಕ್ತಪಡಿಸಿದ್ದಾರೆ. ಇನ್ನೊಂದೆಡೆ ಶಶಿಕಲಾ ನಟರಾಜನ್ ಅವರು ತಮಿಳುನಾಡು ಮುಖ್ಯಮಂತ್ರಿಯಾಗಿ ಪ್ರಮಾಣವನ ಸ್ವೀಕರಿಸುವುದಕ್ಕೆ ತಡೆ ನೀಡುವಂತೆ ಕೋರಿ ತಮಿಳುನಾಡಿನ ಸಮಾಜಸೇವಾ ಸಂಸ್ಥೆ ಸಟ್ಟಾ ಪಂಚಾಯಿತ್ ಸುಪ್ರೀಂಕೋರ್ಟ್ ಗೆ ಅರ್ಜಿ ಸಲ್ಲಿಸಿದೆ.
ಒಟ್ಟಿನಲ್ಲಿ ತಾನೊಂದು ಬಗೆದರೆ ದೈವವೊಂದು ಬಗೆಯುತ್ತದೆ ಎನ್ನುವಂತೆ, ಮುಚ್ಚಿ ಹೋಗಿದ್ದ ಚಿನ್ನಮ್ಮನ ಕೇಸ್ಗಳು ಗದ್ದುಗೆ ಪ್ರಹಸನದ ವೇಳೆ ಮೇಲೆದ್ದು ರುದ್ರ ನರ್ತನ ಮಾಡುತ್ತಿದೆ.
