Asianet Suvarna News Asianet Suvarna News

ಸಿಎಂ ಸಿದ್ದರಾಮಯ್ಯ ಅಣತಿ ಪ್ರಕಾರ ಶಶಿಕಲಾಗೆ ಜೈಲಲ್ಲಿ ಹಾಸಿಗೆ, ಮಂಚ!

ಪರಪ್ಪನ ಅಗ್ರಹಾರ ಕೇಂದ್ರ ಕಾರಾಗೃಹದಲ್ಲಿ ಸೆರೆವಾಸ ಅನುಭವಿಸುತ್ತಿರುವ ತಮಿಳುನಾಡು ಮಾಜಿ ಮುಖ್ಯಮಂತ್ರಿ ಜಯಲಲಿತಾ ಅವರ ಆಪ್ತೆ ಶಶಿಕಲಾ ಅವ​ರಿಗೆ ಮುಖ್ಯ​ಮಂತ್ರಿ ಸಿದ್ದ​ರಾ​ಮಯ್ಯ ಅವರ ಸೂಚನೆ ಮೇರೆಗೆ ಮಂಚ, ಹಾಸಿಗೆ ಮತ್ತು ತಲೆದಿಂಬು ಒದ​ಗಿ​ಸಿ​ರು​ವು​ದಾಗಿ ರಾಜ್ಯ ಬಂದೀಖಾನೆ ಇಲಾಖೆ ನಿವೃತ್ತ ಡಿಜಿಪಿ ಸತ್ಯನಾರಾಯಣ ರಾವ್‌ ತನಿ​ಖಾ​ಧಿ​ಕಾರಿ ಮುಂದೆ ಹೇಳಿಕೆ ನೀಡಿ​ರುವುದು ಇದೀಗ ಬಹಿ​ರಂಗ​ಗೊಂಡಿ​ದೆ.

Sasikala Getting VIP Care in Bengaluru Jail

ಬೆಂಗಳೂರು : ಪರಪ್ಪನ ಅಗ್ರಹಾರ ಕೇಂದ್ರ ಕಾರಾಗೃಹದಲ್ಲಿ ಸೆರೆವಾಸ ಅನುಭವಿಸುತ್ತಿರುವ ತಮಿಳುನಾಡು ಮಾಜಿ ಮುಖ್ಯಮಂತ್ರಿ ಜಯಲಲಿತಾ ಅವರ ಆಪ್ತೆ ಶಶಿಕಲಾ ಅವ​ರಿಗೆ ಮುಖ್ಯ​ಮಂತ್ರಿ ಸಿದ್ದ​ರಾ​ಮಯ್ಯ ಅವರ ಸೂಚನೆ ಮೇರೆಗೆ ಮಂಚ, ಹಾಸಿಗೆ ಮತ್ತು ತಲೆದಿಂಬು ಒದ​ಗಿ​ಸಿ​ರು​ವು​ದಾಗಿ ರಾಜ್ಯ ಬಂದೀಖಾನೆ ಇಲಾಖೆ ನಿವೃತ್ತ ಡಿಜಿಪಿ ಸತ್ಯನಾರಾಯಣ ರಾವ್‌ ತನಿ​ಖಾ​ಧಿ​ಕಾರಿ ಮುಂದೆ ಹೇಳಿಕೆ ನೀಡಿ​ರುವುದು ಇದೀಗ ಬಹಿ​ರಂಗ​ಗೊಂಡಿ​ದೆ.

ಶಶಿ​ಕಲಾರಿಂದ ಲಂಚ ಸ್ವೀಕರಿಸಿರುವ ಆರೋಪ ಕುರಿತಾದ ಪ್ರಕ​ರ​ಣ​ದಲ್ಲಿ ತಮ್ಮ ವಿರುದ್ಧ ಎಸಿಬಿ ದಾಖ​ಲಿ​ಸಿರುವ ಎಫ್‌ಐಆರ್‌ ರದ್ದು ಕೋರಿ ಸತ್ಯನಾರಾಯಣ ರಾವ್‌ ಹೈಕೋ​ರ್ಟ್‌ಗೆ ಅರ್ಜಿ ಸಲ್ಲಿ​ಸಿ​ದ್ದಾರೆ. ಈ ಅರ್ಜಿ​ಯೊಂದಿಗೆ ತಾವು ಈ ಪ್ರಕ​ರ​ಣದ ವಿಚಾ​ರ​ಣಾ​ಧಿ​ಕಾ​ರಿ​ಯಾ​ಗಿದ್ದ ನಿವೃತ್ತ ಐಎ​ಎಸ್‌ ಅಧಿ​ಕಾ​ರಿ ವಿನಯ್‌ ಕುಮಾರ್‌ ಸಮಿತಿಯ ಮುಂದೆ ನೀಡಿದ್ದ ಹೇಳಿಕೆಯ ಕುರಿತ ವರದಿಯನ್ನೂ ಲಗತ್ತಿಸಿದ್ದಾರೆ.

ವಿನಯ್‌ ಕುಮಾರ್‌ ಅವರ ವಿಚಾರಣಾ ಸಮಿತಿ ಮುಂದೆ ಸತ್ಯ​ನಾ​ರಾ​ಯಣ ರಾವ್‌ 2017ರ ಜುಲೈ 25ರಂದು ಹೇಳಿಕೆ ನೀಡಿ​ದ್ದ​ರು. ಅದ​ರಲ್ಲಿ, ಮುಖ್ಯ​ಮಂತ್ರಿ ಸಿದ್ದ​ರಾ​ಮಯ್ಯ ಅವರ ಸೂಚನೆ ಮೇರೆಗೆ ಶಶಿಕಲಾ ಅವರಿಗೆ ಮಂಚ, ಹಾಸಿಗೆ ಮತ್ತು ತಲೆದಿಂಬು ನೀಡಿರು​ವು​ದಾಗಿ ತಿಳಿ​ಸಿ​ದ್ದಾ​ರೆ.

ಶಶಿಕಲಾ ಅವರು ಪರಪ್ಪನ ಅಗ್ರಹಾರ ಜೈಲಿನ ವಿಶೇಷ ಕೋರ್ಟ್‌ಗೆ ಶರಣಾದ ನಂತರ ಆಕೆಯ ಪರ ವಕೀಲರು ಶಶಿಕಲಾಗೆ ಕ್ಲಾಸ್‌-1 ಸೌಲಭ್ಯ ನೀಡುವಂತೆ ಮನವಿ ಸಲ್ಲಿಸಿದರು. ಈ ವಿಚಾರ ಸಂಬಂಧ ಮುಖ್ಯ ಅಧೀಕ್ಷಕರು ತಮಗೆ ಕರೆ ಮಾಡಿ ಈ ಸೌಲಭ್ಯ ನೀಡ​ಬ​ಹುದೇ ಎಂದು ಕೇಳಿ​ದ್ದರು. ನಿಯ​ಮ​ಗಳ ಪ್ರಕಾರ ಇಂತಹ ಸೌಲಭ್ಯ ನೀಡಲು ಸಾಧ್ಯ​ವಿಲ್ಲ ಎಂದು ನಾನು ಸಲಹೆ ನೀಡಿದ್ದೆ. ಇದಾದ ನಂತ​ರವೂ ಶಶಿ​ಕಲಾ ಅವರು ಮತ್ತೆ ಹಲವು ಬಾರಿ ನನಗೆ ಲಿಖಿತ​ವಾಗಿ ವಿಶೇಷ ಸೌಲಭ್ಯ ನೀಡು​ವಂತೆ ಮನವಿ ಮಾಡಿ​ದ್ದರು. ಈ ಮನ​ವಿ​ಯನ್ನು ನಾನು ರಾಜ್ಯ ಸರ್ಕಾ​ರಕ್ಕೆ ಕಳು​ಹಿ​ಸಿ​ದ್ದೆ. ಆದರೆ, ಇದಕ್ಕೆ ಸರ್ಕಾ​ರ​ದಿಂದ ಯಾವುದೇ ಪ್ರತಿ​ಕ್ರಿಯೆ ಬಂದಿ​ರ​ಲಿ​ಲ್ಲ.

ಇದಾದ ಕೆಲ ತಿಂಗಳ ನಂತರ ತಮ್ಮ ಆಪ್ತ ಸಹಾ​ಯ​ಕ ವೆಂಕ​ಟೇಶ್‌ ಮೂಲಕ ನನ್ನನ್ನು ಕೆಪಿಸಿ ಅತಿಥಿ ಗೃಹಕ್ಕೆ ಕರೆ​ಸಿ​ಕೊಂಡ ಮುಖ್ಯ​ಮಂತ್ರಿ ಸಿದ್ದ​ರಾ​ಮಯ್ಯ ಅವರು ಮಂಚ, ಹಾಸಿಗೆ ಹಾಗೂ ತಲೆ​ದಿಂಬು ಒದ​ಗಿ​ಸಲು ಸೂಚಿ​ಸಿ​ದ್ದರು. ಇಂತಹ ಸೂಚನೆ ನೀಡಲು ಸರ್ಕಾ​ರಕ್ಕೆ ಅಧಿ​ಕಾ​ರ​ವಿದೆ. ಹೀಗಾಗಿ ನಾನು ಅದನ್ನು ಪಾಲಿ​ಸ​ಬೇ​ಕಾ​ಯಿತು ಎಂದು ಅವರು ಹೇಳಿಕೆ ನೀಡಿ​ದ್ದರು. ಈ ಹೇಳಿಕೆ ಒಳ​ಗೊಂಡಿ​ರುವ ಸಮಿ​ತಿಯ ವರ​ದಿಯೂ ಸತ್ಯ​ನಾ​ರಾ​ಯಣ ರಾವ್‌ ನ್ಯಾಯಾ​ಲ​ಯಕ್ಕೆ ಸಲ್ಲಿ​ಸಿ​ರುವ ಅರ್ಜಿಯ ಭಾಗ​ವಾ​ಗಿ​ದೆ.

Follow Us:
Download App:
  • android
  • ios