ತಮಿಳುನಾಡಿನ ನೂತನ ಸಿಎಂ ಆಗಿ ಶಶಿಕಲಾ ನಟರಾಜನ್ ಆಯ್ಕೆಯಾಗಿದ್ದಾರೆ. AIADMK ಪಕ್ಷದ ಕಚೇರಿಯಲ್ಲಿ ನಡೆದ ಶಶಿಕಲಾ ನಟರಾಜನ್ ಸಿಎಂ ಆಗಿ ಆಯ್ಕೆಯಾಗಿದ್ದಾರೆ. ನಾಳೆಯಿಂದ ತಮಿಳುನಾಡಿನಲ್ಲಿ ಚಿನ್ನಮ್ಮನ ಆಡಳಿತ ಆರಂಭವಾಗಲಿದೆ.

ಚೆನ್ನೈ(ಫೆ.05): ತಮಿಳುನಾಡಿನ ನೂತನ ಸಿಎಂ ಆಗಿ ಶಶಿಕಲಾ ನಟರಾಜನ್ ಆಯ್ಕೆಯಾಗಿದ್ದಾರೆ. AIADMK ಪಕ್ಷದ ಕಚೇರಿಯಲ್ಲಿ ನಡೆದ ಶಶಿಕಲಾ ನಟರಾಜನ್ ಸಿಎಂ ಆಗಿ ಆಯ್ಕೆಯಾಗಿದ್ದಾರೆ. ನಾಳೆಯಿಂದ ತಮಿಳುನಾಡಿನಲ್ಲಿ ಚಿನ್ನಮ್ಮನ ಆಡಳಿತ ಆರಂಭವಾಗಲಿದೆ.

AIADMK ಪಕ್ಷದ ಕಚೇರಿಯಲ್ಲಿ ನಡೆದ ಸಭೆಯಲ್ಲಿ 'ಶಶಿಕಲಾ ನಟರಾಜನ್'ರನ್ನು ಸಿಎಂ ಆಗಿ ಆಯ್ಕೆ ಮಾಡಲು ನಿರ್ಧಾರ ಕೈಗೊಳ್ಳಲಾಗಿದ್ದು, ಹಾಲಿ ಸಿಎಂ ಪನ್ನೀರ್ ಸೆಲ್ವಂ 'ಚಿನ್ನಮ್ಮ'ನ ಹೆಸರನ್ನು ಈ ಸ್ಥಾನಕ್ಕೆ ಪ್ರಸ್ತಾಪಿಸಿದ್ದಾರೆ. ಈವರೆಗೆ AIADMK ಪಕ್ಷ ಪ್ರಧಾನ ಕಾರ್ಯದರ್ಶಿಯಾಗಿದ್ದ ಶಶಿಕಲಾ ಸಿಎಂ ಆಗಿ ಆಯ್ಕೆಯಾಗುವ ಮೂಲಕ ಜಯಲಲಿತಾ ಹಾದಿಯನ್ನೇ ತುಳಿದಂತಾಗಿದೆ. ಇನ್ನು ಹಾಲಿ ಸಿಎಂ ಈಗಾಗಲೇ ರಾಜ್ಯಪಾಲರ ಬಳಿ ತೆರಳಿದ್ದಾರೆ ಹಾಗೂ ತಮ್ಮ ಸ್ಥಾನಕ್ಕೆ ರಾಜಿನಾಮೆ ನೀಡಿಲಿದ್ದಾರೆ.

ಫೆಬ್ರವರಿ 7 ರಂದು 'ಚಿನ್ನಮ್ಮ' ತಮಿಳುನಾಡಿನ ಸಿಎಂ ಆಗಿ ಪ್ರಮಾಣವಚನ ಸ್ವೀಕರಿಸಲಿದ್ದಾರೆ.

Scroll to load tweet…
Scroll to load tweet…