ಪನ್ನೀರ್ ಸೆಲ್ವಂ ಹೊಸ ಬಾಂಬ್ ಸಿಡಿಸುತ್ತಿದ್ದಂತೆ ತಮಿಳುನಾಡು ರಾಜಕಾರಣದಲ್ಲಿ ಕ್ಷಣಕ್ಕೊಂದು ಮಹತ್ತರವಾದ ಬೆಳವಣಿಗೆಗೆಳು ನಡೆಯುತ್ತಿವೆ. ರಾತ್ರೋ ರಾತ್ರಿ ಚೆನ್ನೈನ ಫೋಯಸ್ ಗಾರ್ಡನ್'ನಲ್ಲಿ ತುರ್ತು ಸಭೆ ನಡೆಸಿದ ಶಶಿಕಲಾ ನಟರಾಜನ್ ಪಕ್ಷದ ಖಜಾಂಚಿ ಹುದ್ದೆಯಿಂದ ಪನ್ನೀರ್ ಸೆಲ್ವಂಗೆ ಗೇಟ್ ಪಾಸ್ ನೀಡಿದ್ದಾರೆ.
ಚೆನ್ನೈ(ಫೆ.08): ಪನ್ನೀರ್ ಸೆಲ್ವಂ ಹೊಸ ಬಾಂಬ್ ಸಿಡಿಸುತ್ತಿದ್ದಂತೆ ತಮಿಳುನಾಡು ರಾಜಕಾರಣದಲ್ಲಿ ಕ್ಷಣಕ್ಕೊಂದು ಮಹತ್ತರವಾದ ಬೆಳವಣಿಗೆಗೆಳು ನಡೆಯುತ್ತಿವೆ. ರಾತ್ರೋ ರಾತ್ರಿ ಚೆನ್ನೈನ ಫೋಯಸ್ ಗಾರ್ಡನ್'ನಲ್ಲಿ ತುರ್ತು ಸಭೆ ನಡೆಸಿದ ಶಶಿಕಲಾ ನಟರಾಜನ್ ಪಕ್ಷದ ಖಜಾಂಚಿ ಹುದ್ದೆಯಿಂದ ಪನ್ನೀರ್ ಸೆಲ್ವಂಗೆ ಗೇಟ್ ಪಾಸ್ ನೀಡಿದ್ದಾರೆ.
ಪಕ್ಷದ ನೂತನ ಖಜಾಂಚಿಯಾಗಿ ಡಿ. ಶ್ರೀನಿವಾಸನ್ ಅವರನ್ನು ನೇಮಿಸಲಾಗಿದೆ. ಶಶಿಕಲಾ ನೇತೃತ್ವದಲ್ಲಿ ನಡೆದ ಸಭೆಯಲ್ಲಿ ಘೋಷಣೆ ಮಾಡಲಾಗಿದೆ. ಪನ್ನೀರ್ ಸೆಲ್ವಂ ಶಶಿಕಲಾ ನಟರಾಜನ್ ವಿರುದ್ಧ ಸಿಡಿದೇಳುತ್ತಿದ್ದಂತೆ ವಿಪಕ್ಷಗಳಾದ ಡಿಎಂಕೆ, ಕಾಂಗ್ರೆಸ್ ಪನ್ನೀರ್ ಗೆ ಬೆಂಬಲ ನೀಡುವ ಸಾಧ್ಯತೆ ಬಗ್ಗೆ ಮಾತನಾಡುತ್ತಿವೆ.
ತಮಿಳುನಾಡಿನ ರಾಜಕೀಯ ಅಸ್ಥಿರತೆಗೆ ಬಿಜೆಪಿಯೇ ಕಾರಣ ಎಂದು ಕಾಂಗ್ರೆಸ್ ಆರೋಪಿಸಿದೆ. ಇನ್ನೊಂದೆಡೆ ಮುಂಬೈನಲ್ಲಿದ್ದ ರಾಜ್ಯಪಾಲ ವಿದ್ಯಾಸಾಗರ್ ರಾವ್ ಇಂದು ತಮಿಳುನಾಡಿಗೆ ಆಗಮಿಸಿಲಿದ್ದಾರೆ.
