ಬೆಂಗಳೂರಿನ ಮ್ಯಾಜಿಸ್ಟ್ರೇಟ್ ಕೋರ್ಟ್'ನ ಕೊಠಡಿ ಸಂಖ್ಯೆ 48ರಲ್ಲಿ ಶಶಿಕಲಾ ಸೇರಿದಂತೆ ಮೂವರು ಶರಣಾಗತಿಯ ನಂತರ ಪೊಲೀಸರು ಪರಪ್ಪನ ಅಗ್ರಹಾರಕ್ಕೆ ಕರೆದುಕೊಂಡು ಹೋಗುತ್ತಾರೆ.
ಚೆನ್ನೈ(ಫೆ.15): ಶರಣಾಗತಿಗೆ ಕಾಲಾವಕಾಶ ಕೋರಿ ವಿಕೆ ಶಶಿಕಲಾ ಸಲ್ಲಿಸಿದ ಅರ್ಜಿಯನ್ನು ಸುಪ್ರೀಂ ಕೋರ್ಟ್ ವಜಾಗೊಳಿಸಿದ್ದು, ಕೂಡಲೇ ಬೆಂಗಳೂರು ಕೋರ್ಟ್'ಗೆ ತೆರಳಿ ಶರಣಾಗುವಂತೆ ಸೂಚನೆ ನೀಡಿದೆ. ಶಿಕ್ಷೆ ಪ್ರಕಟವಾದ ಕಾರಣ ಶರಣಾಗಲು 4 ವಾರಗಳು ಕಾಲಾವಕಾಶ ಕೋರಿ ಸುಪ್ರೀಂ ಕೋರ್ಟ್'ಗೆ ಅರ್ಜಿ ಸಲ್ಲಿಸಿದ್ದರು. ಮನವಿಯನ್ನು ಪರಿಶೀಲಿಸಿದ ಕೋರ್ಟ್ ‘ಪ್ರಕರಣದ ಬಗ್ಗೆ ಈಗಾಗಲೇ ತೀರ್ಪು ನೀಡಲಾಗಿದೆ’ ‘ಶರಣಾಗತಿಗೆ ಮತ್ತೆ ಕಾಲಾವಕಾಶ ನೀಡುವುದು ಸಾಧ್ಯವಿಲ್ಲ’' ಎಂದು ತಿರಸ್ಕರಿಸಿದೆ. ಈ ಹಿನ್ನಲೆಯಲ್ಲಿ ಶಶಿಕಲಾ ನಟರಾಜನ್ ಕಾನೂನು ಹೋರಾಟಕ್ಕೆ ಮತ್ತೆ ಹಿನ್ನೆಡೆಯಾಗಿದೆ.
ಬೆಂಗಳೂರಿನ ಮ್ಯಾಜಿಸ್ಟ್ರೇಟ್ ಕೋರ್ಟ್'ನ ಕೊಠಡಿ ಸಂಖ್ಯೆ 48ರಲ್ಲಿ ಶಶಿಕಲಾ ಸೇರಿದಂತೆ ಮೂವರು ಶರಣಾಗತಿಯ ನಂತರ ಪೊಲೀಸರು ಪರಪ್ಪನ ಅಗ್ರಹಾರಕ್ಕೆ ಕರೆದುಕೊಂಡು ಹೋಗುತ್ತಾರೆ.