ಇಂದು ಬೆಳಿಗ್ಗೆ ಮಧುಸೂದನ್ ಅವರನ್ನು ವಿಕೆ ಶಶಿಕಲಾ ಅವರು ಉಚ್ಚಾಟನೆಗೊಳಿಸಿದ್ದರು.
ಚೆನ್ನೈ(ಫೆ.10): ತಮಿಳುನಾಡಿನಲ್ಲಿ ನಡೆಯುತ್ತಿರುವ ಮಹತ್ವದ ರಾಜಕೀಯ ಬೆಳವಣಿಗೆಯಲ್ಲಿ ಎಐಎಡಿಎಂಕೆ ಪಕ್ಷದಿಂದ ಪ್ರಧಾನ ಕಾರ್ಯದರ್ಶಿ ವಿಕೆ ಶಶಿಕಲಾ ಅವರನ್ನು ಪಕ್ಷದ ಅಧ್ಯಕ್ಷ ಮಧುಸೂದನ್ ಅವರು ಉಚ್ಚಾಟನೆ ಮಾಡಿದ್ದಾರೆ. ಇಂದು ಬೆಳಿಗ್ಗೆ ಮಧುಸೂದನ್ ಅವರನ್ನು ವಿಕೆ ಶಶಿಕಲಾ ಅವರು ಉಚ್ಚಾಟನೆಗೊಳಿಸಿದ್ದರು.
'ಶಶಿಕಲಾ ನನ್ನನ್ನು ಉಚ್ಚಾಟನೆಗೊಳಿಸುವುದಕ್ಕೆ ಮುನ್ನವೇ ನಾನು ಆಕೆಯನ್ನು ಉಚ್ಚಾಟನೆಗೊಳಿಸಿದ್ದಾನೆ. ಪಕ್ಷದ ನಿಯಮಗಳನ್ನು ಉಲ್ಲಂಘನೆಗೊಳಿಸಿ ಕಾರಣದಿಂದ ಶಶಿಕಲಾ ನಟರಾಜನ್ ಅವರನ್ನು ಪಕ್ಷದ ಪ್ರಥಮಿಕ ಸದಸ್ಯತ್ವದಿಂದ ಉಚ್ಚಾಟಿಸಿದ್ದು, ಈ ಬಗ್ಗೆ ಚುನಾವಣಾ ಆಯೋಗಕ್ಕೂ ಪತ್ರ ಬರೆದಿದ್ದೇನೆ'ಎಂದು ಮಧುಸೂದನ್ ತಿಳಿಸಿದ್ದಾರೆ.
ಶಶಿಕಲಾ ಕೂಡ ಇದೇ ಕಾರಣ ಕೊಟ್ಟು ಮಧುಸೂದನ್ ಅವರನ್ನು ಉಚ್ಚಾಟನೆಗೊಳಿಸಿದ್ದರು. ಇವರ ಜಾಗಕ್ಕೆ ಮಾಜಿ ಮಂತ್ರಿ ಕೆ.ಎ. ಸೆಂಗೋಟಿಯನ್ ಅವರನ್ನು ನೇಮಿಸಿದ್ದರು. ಕಾನೂನಿನ ನಿಯಮಗಳ ಪ್ರಕಾರ ಪಕ್ಷದಿಂದ ಉಚ್ಚಾಟನೆಗೊಂಡವರು ಮುಖ್ಯಮಂತ್ರಿ ಸ್ಥಾನಕ್ಕೆ ಸ್ಪರ್ಧಿಸುವಂತಿಲ್ಲ.
