ಆಸ್ಟ್ರೇಲಿಯಾದ ಕ್ರಿಕೆಟಿಗ ಪೀಟರ್ ಹ್ಯಾಂಡ್ಸ್‌ಕಂಬ್ ರಾಷ್ಟ್ರೀಯ ತಂಡದಲ್ಲಿ ಸ್ಥಾನ ಸಿಕ್ಕ ಪರಿಣಾಮ ಯಾರ್ಕ್‌ಶೈರ್ ತಂಡವನ್ನು ತೊರೆದಿದ್ದರು.ಈಗ ಅವರ ಜಾಗದಲ್ಲಿ ಸರ್ಫರಾಜ್  ಆಡಲಿದ್ದಾರೆ.

ಲಂಡನ್(ಜು.27): ಪಾಕಿಸ್ತಾನ ಕ್ರಿಕೆಟ್ ತಂಡದ ನಾಯಕ ಸರ್ಫರಾಜ್ ಅಹ್ಮದ್ ಇದೀಗ ಇಂಗ್ಲೆಂಡ್' ಕೌಂಟಿ ಕ್ರಿಕೆಟ್'ನಲ್ಲೂ ಸ್ಥಾನ ಲಭಿಸಿದೆ.

ಪ್ರಮುಖ ಕೌಂಟಿ ತಂಡ ಯಾರ್ಕ್‌ಶೈರ್ ಕ್ರಿಕೆಟ್ ಕ್ಲಬ್‌ ಪರ ಸರ್ಫರಾಜ್ ಆಡುತ್ತಿದ್ದಾರೆ. ಆಸ್ಟ್ರೇಲಿಯಾದ ಕ್ರಿಕೆಟಿಗ ಪೀಟರ್ ಹ್ಯಾಂಡ್ಸ್‌ಕಂಬ್ ರಾಷ್ಟ್ರೀಯ ತಂಡದಲ್ಲಿ ಸ್ಥಾನ ಸಿಕ್ಕ ಪರಿಣಾಮ ಯಾರ್ಕ್‌ಶೈರ್ ತಂಡವನ್ನು ತೊರೆದಿದ್ದರು.ಈಗ ಅವರ ಜಾಗದಲ್ಲಿ ಸರ್ಫರಾಜ್ ಆಡಲಿದ್ದಾರೆ. ವೀಸಾ ಸಮಸ್ಯೆಯಿಂದಾಗಿ ಪಾಕಿಸ್ತಾನದ ವಿಕೆಟ್ ಕೀಪರ್ ಮತ್ತು ಬ್ಯಾಟ್ಸ್‌ಮನ್ ಆಗಿರುವ ಸರ್ಫರಾಜ್ ಯಾರ್ಕ್‌ಶೈರ್ ಕ್ಲಬ್ ಪರ ಕಡಿಮೆ ಅವಧಿಯ ಒಪ್ಪಂದಕ್ಕೆ ಸಹಿ ಮಾಡಿದ್ದು, ಕೇವಲ 5 ಪಂದ್ಯಗಳಿಗೆ ಮಾತ್ರ ಸೀಮಿತವಾಗಿದ್ದಾರೆ.