ಮಂಗಳೂರು ವಿಶ್ವವಿದ್ಯಾಲಯದ ಬಿಸಿಎ ಮೊದಲ ಸೆಮಿಸ್ಟರ್ ಕನ್ನಡ ಪುಸ್ತಕದಲ್ಲಿರುವ ‘ಯುದ್ಧ ದು ಉದ್ಯಮ’ ಪಾಠವನ್ನು ಹಾಗೇಯೇ ಉಳಿಸಿಕೊಳ್ಳಬೇಕು, ರದ್ದುಗೊಳಿಸಬಾರದು ಎಂದು ಹಿರಿಯ ಸಾಹಿತಿ ಸಾರಾ ಅಬೂಬಕ್ಕರ್ ಒತ್ತಾಯಿಸಿದ್ದಾರೆ.

ಮಂಗಳೂರು: ಮಂಗಳೂರು ವಿಶ್ವವಿದ್ಯಾಲಯದ ಬಿಸಿಎ ಮೊದಲ ಸೆಮಿಸ್ಟರ್ ಕನ್ನಡ ಪುಸ್ತಕದಲ್ಲಿರುವ ‘ಯುದ್ಧ ದು ಉದ್ಯಮ’ ಪಾಠವನ್ನು ಹಾಗೇಯೇ ಉಳಿಸಿಕೊಳ್ಳಬೇಕು, ರದ್ದುಗೊಳಿಸಬಾರದು ಎಂದು ಹಿರಿಯ ಸಾಹಿತಿ ಸಾರಾ ಅಬೂಬಕ್ಕರ್ ಒತ್ತಾಯಿಸಿದ್ದಾರೆ.

ಅಭಿರುಚಿ ಪ್ರಕಾಶನ ಹೊರತಂದಿರುವ, ಸಿನೆಮಾ ನಿರ್ದೇಶಕ ಸುಧೀರ್ ಅತ್ತಾವರ್ ಬರೆದ ‘ಬಕಾವಲಿಯ ಹೂ’ ನಾಟಕ ಕೃತಿಯನ್ನು ನಗರದಲ್ಲಿ ಶನಿವಾರ ಬಿಡುಗೊಳಿಸಿ ಮಾತನಾಡಿ, ಸೈನಿಕರು ಒಳ್ಳೆಯವರೇ, ಆದರೆ ಅವರು ತಪ್ಪನ್ನೇ ಮಾಡುವುದಿಲ್ಲ ನ್ನುವುದು ಸರಿಯಲ್ಲ, ಅವರೂ ತಪ್ಪು ಮಾಡಬಹುದು. ಸೈನಿಕರಿಂದ ತೊಂದರೆ ಆಗಿದ್ದರಿಂದಲೇ ವರ್ಷಾನುಗಟ್ಟಲೆ ಪ್ರತಿಭಟನೆಯೂ ನಡೆದಿದೆ. ಅದರರ್ಥ ಅವರು ತಪ್ಪು ಮಾಡಿದ್ದಾರೆ ಎಂದೇ ಅಲ್ಲವೇ? ಪಾಠವನ್ನು ತೆಗೆಯಬೇಕು ಎನ್ನುವುದು ಎಷ್ಟು ಔಚಿತ್ಯವಾದುದು? ಅದನ್ನು ಹಾಗೆಯೇ ಉಳಿಸಿಕೋಂಡು, ಸರಿಯಾಗಿ ಓದಿ ಅರ್ಥ ಮಾಡಿಕೊಲ್ಳಬೇಕಾಗಿದೆ ಎಂದು ಅಭಿಪ್ರಾಯಪಟ್ಟರು.