ಚಕ್ರತೀರ್ಥ, ಸಂತೋಷ್‌ಗೆ ತಿ.ತಾ.ಶರ್ಮ ನೆನಪಿನ ಪುರಸ್ಕಾರ
ಅಂಕಣಕಾರರಾದ ರೋಹಿತ್ ಚಕ್ರತೀರ್ಥ, ಸಂತೋಷ್ ತಮ್ಮಯ್ಯ ಅವರಿಗೆ ತಿ.ತಾ.ಶರ್ಮ ನೆನಪಿನ ಪುರಸ್ಕಾರ ಪ್ರದಾನ ಮಾಡಲಾಯಿತು. ಲೇಖಕ ಬಾಬು ಕೃಷ್ಣಮೂರ್ತಿ, ವಿಶ್ವ ಸಂವಾದ ಕೇಂದ್ರದ ಸ್ಥಾಪಕ ಟ್ರಸ್ಟಿಬಿ.ಎಸ್.ಮಂಜುನಾಥ್ ಮುಂತಾದವರ ಉಪಸ್ಥಿತಿಯಲ್ಲಿ ಈ ಕಾರ್ಯಕ್ರಮ ನಡೆಯಿತು.
ಬೆಂಗಳೂರು (ಜೂ.24): ಇಂದಿನ ಮಾಧ್ಯಮಗಳಲ್ಲಿ ರಾಷ್ಟ್ರದ್ರೋಹಿ ಹಾಗೂ ಭ್ರಷ್ಟಾಚಾರಿಗಳ ದನಿಯೇ ದೊಡ್ಡದಾಗಿದೆ ಎಂದು ಲೇಖಕ ಬಾಬು ಕೃಷ್ಣಮೂರ್ತಿ ವಿಷಾದಿಸಿದರು.
ವಿಶ್ವ ಸಂವಾದ ಕೇಂದ್ರ ನಾರದ ಜಯಂತಿ ಪ್ರಯುಕ್ತ ನಗರದ ರಾಷ್ಟ್ರೋತ್ಥಾನ ಪರಿಷತ್‌ನ ಕೇಶವ ಶಿಲ್ಪ ಸಭಾಂಗಣದಲ್ಲಿ ಭಾನುವಾರ ಆಯೋಜಿಸಿದ್ದ ಸನ್ಮಾನ ಕಾರ್ಯಕ್ರಮದಲ್ಲಿ ಅಂಕಣಕಾರ ರೋಹಿತ್ ಚಕ್ರತೀರ್ಥ ಅವರಿಗೆ ‘ತಿ.ತಾ.ಶರ್ಮ ನೆನಪಿನ ಪುರಸ್ಕಾರ’ ಹಾಗೂ ಅಂಕಣಕಾರ ಸಂತೋಷ್ ತಮ್ಮಯ್ಯ ಅವರಿಗೆ ‘ಹಿರಿಯ ಪತ್ರಕರ್ತ ಬೆಸುನಾ ಮಲ್ಯರ ನೆನಪಿನ ಪುರಸ್ಕಾರ’ ಪ್ರದಾನ ಮಾಡಿ ಅವರು ಮಾತನಾಡಿದರು.
ಬೆಸುನಾ ಮಲ್ಯ ಹಾಗೂ ತಿ.ತಾ.ಶರ್ಮ ಯಾವ ಪ್ರಲೋಭನೆಗಳಿಗೂ ಒಳಗಾಗದೆ ಪ್ರಾಮಾಣಿಕತೆಯಿಂದ ಪತ್ರಿಕಾ ಧರ್ಮ ಎತ್ತಿ ಹಿಡಿದಿದ್ದರು. ರಾಷ್ಟ್ರೀಯ ಹಿತದೃಷ್ಟಿಯಿಂದ ತೀಕ್ಷ$್ಣ ಬರಹದ ಲೇಖನಗಳನ್ನು ಬರೆಯುತ್ತಿದ್ದರು. ಈ ಇಬ್ಬರು ಆದರ್ಶ ಪತ್ರಕರ್ತರಾಗಿದ್ದರು ಎಂದು ಹೇಳಿದರು.
ಮಾಧ್ಯಮಗಳ ಚರ್ಚೆಗಳಲ್ಲಿ ರಾಷ್ಟ್ರಭಕ್ತರಿಗಿಂತ ರಾಷ್ಟ್ರದ್ರೋಹಿ, ಭ್ರಷ್ಟಾಚಾರಿಗಳ ದನಿಯೇ ದೊಡ್ಡದಾಗಿದೆ. ಹಾಗಾಗಿ ಸಮರ್ಥವಾಗಿ ವಿಷಯಾಧಾರಿತವಾಗಿ ಮಾತನಾಡಬಲ್ಲ ಯುವ ಸಮುದಾಯವನ್ನು ತಯಾರು ಮಾಡಬೇಕಿದೆ. ಯುವಪೀಳಿಗೆ ಪತ್ರಕರ್ತರು ಬುದ್ಧಿವಂತಿಕೆ ಜತೆಗೆ ಅಧ್ಯಯನಶೀಲತೆ ಮೈಗೂಡಿಸಿಕೊಳ್ಳುವ ಅಗತ್ಯವಿದೆ ಎಂದರು.
ಟಿಪ್ಪು ಜಯಂತಿ ವಿರೋಧಿ ಲೇಖನ ಬರೆದ ಸಂತೋಷ್ ತಮ್ಮಯ್ಯ ಅರೆಸ್ಟ್
ವಿಶ್ವ ಸಂವಾದ ಕೇಂದ್ರದ ಸ್ಥಾಪಕ ಟ್ರಸ್ಟಿಬಿ.ಎಸ್.ಮಂಜುನಾಥ್ ಮತ್ತಿತರರು ಉಪಸ್ಥಿತರಿದ್ದರು.