ಮಾಜಿ ಮೇಯರ್ ಶಾಂತಕುಮಾರಿ ಪತಿ ವಿರುದ್ಧ ಗಂಭೀರ ಆರೋಪ

First Published 9, Apr 2018, 1:56 PM IST
Santhakumari Husband Got Second Marriage
Highlights

ಮಾಜಿ‌ ಮೇಯರ್ ಶಾಂತಕುಮಾರಿ ಗಂಡನ ವಿರುದ್ಧ ಗಂಭೀರ ಆರೋಪ ಎದುರಾಗಿದೆ. ಶಾಂತಕುಮಾರಿ ಗಂಡ ರವಿ ಕುಮಾರ್ ವಿರುದ್ಧ ವಂಚನೆ ಆರೋಪ ಕೇಳಿ ಬಂದಿದ್ದು, ಹೇಮಾ ಎಂಬ ಮಹಿಳೆ ವಂಚನೆ ಮಾಡಿದ್ದಾಗಿ ಆರೋಪ ಮಾಡಿದ್ದಾರೆ.

ಬೆಂಗಳೂರು : ಮಾಜಿ‌ ಮೇಯರ್ ಶಾಂತಕುಮಾರಿ ಗಂಡನ ವಿರುದ್ಧ ಗಂಭೀರ ಆರೋಪ ಎದುರಾಗಿದೆ. ಶಾಂತಕುಮಾರಿ ಗಂಡ ರವಿ ಕುಮಾರ್ ವಿರುದ್ಧ ವಂಚನೆ ಆರೋಪ ಕೇಳಿ ಬಂದಿದ್ದು, ಹೇಮಾ ಎಂಬ ಮಹಿಳೆ ವಂಚನೆ ಮಾಡಿದ್ದಾಗಿ ಆರೋಪ ಮಾಡಿದ್ದಾರೆ. ಅಲ್ಲದೇ ರವಿ ಕುಮಾರ್ ತನ್ನನ್ನು ಮದುವೆಯಾಗಿ ಕೈ ಕೊಟ್ಟಿದ್ದಾರೆ.

2003ರಲ್ಲಿ ಕನಕಪುರದ ಪೇಟೆ ಗಿರಿ ಯಲ್ಲಿ ಮದುವೆ ಮಾಡಿಕೊಂಡಿದ್ದಾರೆ. ಕಳೆದ 15 ವರ್ಷದಿಂದ ಇಬ್ಬರ ಮಧ್ಯೆ ಸಂಬಂಧವಿತ್ತು. ಪರಿಚಯವಾದ 6 ತಿಂಗಳಿಗೆ ಮದುವೆ‌ ಮಾಡಿಕೊಂಡಿದ್ದರು ಎಂದು ಹೇಳಿದ್ದಾರೆ.

 ಅಲ್ಲದೇ ರವಿಕುಮಾರ್ ಮದುವೆ ಆದ ಬಳಿಕ ಕನಕಪುರದಲ್ಲಿ ಮನೆ ಮಾಡಿ ಇಟ್ಟಿದ್ದರು. ಬಳಿಕ ಮಗುವಾಗಿತ್ತು. ಸದ್ಯ ಮಗುವಿಗೆ 12 ವರ್ಷವಾಗಿದೆ ಎಂದು ಹೇಳಿದ್ದಾರೆ.

ಇನ್ನು ಹೇಮಾ ಅಕ್ಕ ಲಕ್ಷ್ಮೀಗೆ ಚಿಕಿತ್ಸೆಗಾಗಿ ರವಿ ಕುಮಾರ್ 25 ಸಾವಿರ ಹಣವನ್ನೂ  ಕೊಟ್ಟಿದ್ದರು. ಹೇಮಾ ಅಕ್ಕನ ಮಗಳ ಮದುವೆಗೆ 50 ಸಾವಿರ ಹಣವನ್ನೂ ನೀಡಿದ್ದರು. ಆ ಹಣವನ್ನು ಮರು ಪಾವತಿ ಮಾಡುವಂತೆ ಒತ್ತಾಯಿಸಿದ್ದರು. ಆದರೆ ಬಳಿಕ ರವಿಕುಮಾರ್ ಹಣದ ಬದಲಾಗಿ ಮದುವೆ ಆಗುವಂತೆ ಹೇಳಿದ್ದರು ಎನ್ನಲಾಗಿದೆ.

ಆದರೆ ಶಾಂತ ಕುಮಾರಿ ಮೇಯರ್ ಆದಾಗಿನಿಂದ ಇಬ್ಬರ ಮಧ್ಯೆ ಜಗಳ ಶುರುವಾಗಿತ್ತು.  ಈಗ ಹೇಮಾಗೂ ತನಗೂ ಸಂಬಂಧವೇ ಇಲ್ಲವೆಂಬಂತೆ ಇದ್ದಾರೆ ಎನ್ನಲಾಗಿದೆ. ಸದ್ಯ ರವಿ ಕುಮಾರ್ ವಿರುದ್ಧ ದೂರು ನೀಡಿದರೂ ಕೂಡ ಚಂದ್ರಾಲೇಔಟ್ ಪೊಲೀಸರು ದೂರು ದಾಖಲಿಸಿಕೊಳ್ಳಲು ನಕಾರ ವ್ಯಕ್ತಪಡಿಸಿದ್ದಾರೆ.

loader