ರಜಪೂತ್ ರಾಣಿಯನ್ನು ಚಿತ್ರದಲ್ಲಿ ನಿಕೃಷ್ಟವಾಗಿ ತೋರಿಸಲಾಗಿದೆ ಎಂದು ರಜ್‌'ಪೂತ್ ಕರ್ಣಿ ಸೇನಾದ ಪ್ರತಿಭಟನಾಕಾರರು ಬನ್ಸಾಲಿ ಅವರ ಕಪಾಳಮೋಕ್ಷ ಮಾಡಿದ್ದೂ ಅಲ್ಲದೇ, ಕೂದಲನ್ನು ಹಿಡಿದು ಎಳೆದಾಡಿ ಹಲ್ಲೆ ಮಾಡಿದ್ದಾರೆ ಎಂದು ವರದಿಯಾಗಿದೆ.

ಜೈಪುರ(ಜ.27): ಜೈಪುರದಲ್ಲಿ ನಡೆಯುತ್ತಿದ್ದ ಪದ್ಮಾವತಿ ಚಿತ್ರದ ಚಿತ್ರಕರಣ ವೇಳೆ ನಿರ್ದೇಶಕ ಸಂಜಯ್ ಲೀಲಾ ಬನ್ಸಾಲಿ ಅವರ ಮೇಲೆ ಕೆಲ ಸ್ಥಳೀಯರು ಹಲ್ಲೆ ನಡೆಸಿದ್ದಾರೆ.

ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿgooglePreferred

ಜೈಪುರದ ಕೋಟೆಯೊಳಗೆ ಚಿತ್ರೀಕರಣ ನಡೆಯುತ್ತಿರುವ ವೇಳೆಯೇ ಈ ದಾಳಿ ನಡೆಸಲಾಗಿದೆ. ರಜಪೂತ್ ರಾಣಿಯನ್ನು ಚಿತ್ರದಲ್ಲಿ ನಿಕೃಷ್ಟವಾಗಿ ತೋರಿಸಲಾಗಿದೆ ಎಂದು ರಜ್‌'ಪೂತ್ ಕರ್ಣಿ ಸೇನಾದ ಪ್ರತಿಭಟನಾಕಾರರು ಬನ್ಸಾಲಿ ಅವರ ಕಪಾಳಮೋಕ್ಷ ಮಾಡಿದ್ದೂ ಅಲ್ಲದೇ, ಕೂದಲನ್ನು ಹಿಡಿದು ಎಳೆದಾಡಿ ಹಲ್ಲೆ ಮಾಡಿದ್ದಾರೆ ಎಂದು ವರದಿಯಾಗಿದೆ.

ರಾಣಿ ಪದ್ಮಿನಿ, ಇಸ್ಲಾಂ ದಾಳಿಕೋರ ಅಲಾವುದ್ದೀನ್ ಖಿಲ್ಜಿಗೆ ಸೆರೆಸಿಕ್ಕುವ ಬದಲು ತನ್ನ ಜೀವನವನ್ನು ತ್ಯಾಗಮಾಡಿದ ಮಹಾನ್ ಮಹಿಳೆ. ಆದರೆ, ಚಿತ್ರದಲ್ಲಿ ಪದ್ಮಿನಿ (ದೀಪಿಕಾ) ಹಾಗೂ ಅಲಾವುದ್ದೀನ್ ಖಿಲ್ಜಿ (ರಣಬೀರ್) ನಡುವೆ ಹಲವು ಪ್ರೇಮ, ಪ್ರಣಯ ಪ್ರಸಂಗಗಳನ್ನು ಚಿತ್ರೀಕರಿಸಲಾಗಿದೆ ಎಂದು ಆರೋಪಿಸಿದ್ದಾರೆ. ಚಿತ್ರದಲ್ಲಿರುವ ಇಂತಹ ದೃಶ್ಯಗಳನ್ನು ನಾಶಗೊಳಿಸಬೇಕೆಂದು ಆಗ್ರಹಿಸಿದ್ದಾರೆ.

ಈ ಅಹಿತಕರ ಘಟನೆ ನಡೆದ ಬಳಿಕ ಚಿತ್ರತಂಡ ಜೈಪುರದಲ್ಲಿ ಚಿತ್ರೀಕರಣ ನಡೆಸದಿರಲು ತೀರ್ಮಾನಿಸಿದೆ ಎಂದು ವರದಿಯಾಗಿದೆ.