ಜಾರಿ ನಿರ್ದೇಶನಾಲಯದ ಮುಖ್ಯಸ್ಥರಾಗಿ ಸಂಜಯ್ ಕುಮಾರ್ ಮಿಶ್ರಾ ನೇಮಕ! 1984ರ ಬ್ಯಾಚ್​ನ ಐಆರ್​ಎಸ್ ಅಧಿಕಾರಿ ಸಂಜಯ್ ಕುಮಾರ್ ಮಿಶ್ರಾ! ನಾಳೆ ಕರ್ನಲ್ ಸಿಂಗ್ ಅಧಿಕಾರ ಅಂತ್ಯಗೊಳ್ಳಲಿದೆ!ಮೂರು ತಿಂಗಳ ಅವಧಿಗೆ ಜಾರಿ ನಿರ್ದೇಶನಾಲಯದ ಮುಖ್ಯಸ್ಥರಾಗಿ ಸಂಜಯ್ ನೇಮಕ

ನವದೆಹಲಿ(ಅ.27):ಐಆರ್​ಎಸ್ ಅಧಿಕಾರಿ ಸಂಜಯ್ ಕುಮಾರ್ ಮಿಶ್ರಾ ಜಾರಿ ನಿರ್ದೇಶನಾಲಯದ ಮುಖ್ಯಸ್ಥರನ್ನಾಗಿ ನೇಮಿಸಿ ಕೇಂದ್ರ ಸರ್ಕಾರ ಆದೇಶ ಹೊರಡಿಸಿದೆ.

ಸಂಜಯ್ ಮಿಶ್ರಾ 1984ರ ಬ್ಯಾಚ್​ನ ಐಆರ್​ಎಸ್ ಅಧಿಕಾರಿಯಾಗಿದ್ದಾರೆ. ಸಂಜಯ್ ಮಿಶ್ರಾ ಈ ಮೊದಲು ಏಜೆನ್ಸಿಯ ಪ್ರಧಾನ ವಿಷೇಷ ನಿರ್ದೇಶಕರಾಗಿ ನೇಮಕವಾಗಿದ್ದರು.

 ನಾಳೆ ಕರ್ನಲ್ ಸಿಂಗ್ ಅಧಿಕಾರ ಅಂತ್ಯಗೊಳ್ಳಲಿದ್ದು, ಮೂರು ತಿಂಗಳ ಅವಧಿಗೆ ಜಾರಿ ನಿರ್ದೇಶನಾಲಯದ ಮುಖ್ಯಸ್ಥರಾಗಿ ಸಂಜಯ್ ಮಿಶ್ರಾ ಹೆಚ್ಚುವರಿ ಅಧಿಕಾರ ವಹಿಸಿಕೊಳ್ಳಲಿದ್ದಾರೆ. 

ಸದ್ಯ ಮಿಶ್ರಾ ಆದಾಯ ತೆರಿಗೆ ಇಲಾಖೆಯ ಆಯುಕ್ತರಾಗಿದ್ದಾರೆ. ಅವರ ಸಾಮರ್ಥ್ಯ ಗಮನಿಸಿ ಸರ್ಕಾರ ಅವರಿಗೆ ಹೆಚ್ಚುವರಿ ಜವಾಬ್ದಾರಿ ನೀಡಿದೆ ಎಂದು ಮೂಲಗಳು ತಿಳಿಸಿವೆ.