ಡ್ರಗ್ಸ್ ಪ್ರಕರಣದಲ್ಲಿ ಜೈಲು ಸೇರಿದ್ದ ನಟಿ ಸಂಜನಾ ಗಲ್ರಾಣಿಗೆ ಜಾಮೀನು ಸಿಕ್ಕಿದೆ. ದೇಶದಲ್ಲಿ ಪ್ರಧಾನಿ ಮೋದಿ ಬಂದ ಬಳಿಕ ಅತೀ ದೊಡ್ಡ ಬದಲಾವಣೆಯಾಗಿದೆ ಎಂದು ಯುಪಿ ಸಿಎಂ ಯೋಗಿ ಆದಿತ್ಯನಾಥ್ ಹೇಳಿದ್ದಾರೆ. ಸಿಎಂ BSY ಕಾರ್ಯದರ್ಶಿ ರೇಣುಕಾಚಾರ್ಯ ಚೀನಾ ಕಾರು ಖರೀದಿಸಿದ್ದಾರೆ. ರೋಹಿತ್ ಶರ್ಮಾ ಫಿಟ್ನೆಸ್ ಟೆಸ್ಟ್ ಪಾಸ್, ಹಲವು ನಾಯಕರು ಕಾಂಗ್ರೆಸ್ ಸೇರ್ಪಡೆ ಸೇರಿದಂತೆ ಡಿ.11ರ ಟಾಪ್ 10 ಸುದ್ದಿ ವಿವರ ಇಲ್ಲಿವೆ.
ಮೋದಿ ಬಂದ ಮೇಲೆ ಆದ ದೊಡ್ಡ ಬದಲಾವಣೆಯೊಂದನ್ನು ಹೇಳಿದ ಯೋಗಿ...
ಪ್ರಧಾನಿ ನರೇಂದ್ರ ಮೋದಿ ನಾಯಕತ್ವದಲ್ಲಿ ಭಾರತವನ್ನು ನೋಡುತ್ತಿದ್ದ ವಿಶ್ವದ ದೃಷ್ಟಿಕೋನವೇ ಬದಲಾಗಿದ್ದು ಮತ್ತೊಮ್ಮೆ ಭಾರತ ಏನು ಮಾಡುತ್ತದೆ ಎಂಬುದನ್ನು ಎಲ್ಲರೂ ನೋಡುತ್ತಿದ್ದಾರೆ ಎಂದು ಉತ್ತರ ಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಹೇಳಿದ್ದಾರೆ.
ರಕ್ತ ಸುರಿಯುತ್ತಿತ್ತು.. ಕಂಠಪೂರ್ತಿ ಕುಡಿದ ಯೋಧನ ಹೈಡ್ರಾಮಕ್ಕೆ ಪೊಲೀಸರೆ ಬೆಚ್ಚಿಬಿದ್ರು!...
ಪೊಲೀಸ್ ಠಾಣೆಯ ಮುಂದೆ ಹೈಡ್ರಾಮಾ ನಡೆದಿತ್ತು. ಕಂಠಪೂರ್ತಿ ಕುಡಿದಿದ್ದ ಯೋಧನೊಬ್ಬ ಪೊಲೀಸರನ್ನು, ಎಸ್‌ಪಿಯನ್ನು, ಐಜಿಯನ್ನು ಬಾಯಿಗೆ ಬಂದಂತೆ ಬಯ್ಯುತ್ತಿದ್ದ.
ರೈತರ ಬೇಡಿಕೆ ಈಡೇರದಿದ್ದರೆ ಜನ ಆಂದೋಲನ; ಕೇಂದ್ರಕ್ಕೆ ಅಣ್ಣಾ ಹಜಾರೆ ಎಚ್ಚರಿಕೆ!...
ಜನ ಲೋಕಪಾಲ್ ಕಾಯ್ದೆ ಆಂದೋಲನ ಮೂಲಕ ದೇಶಾದ್ಯಂತ ಭಾರಿ ಸಂಚಲನ ಮೂಡಿಸಿದ್ದ ಸಾಮಾಜಿಕ ಹೋರಾಟಗಾರ ಅಣ್ಣಾ ಹಜಾರೆ ಇದೀಗ ಜನ ಆಂದೋಲನ ಆರಂಭಿಸುವುದಾಗಿ ಎಚ್ಚರಿಕೆ ನೀಡಿದ್ದಾರೆ.
ಸೋನಿಯಾ ನಿವೃತ್ತ : UPA ಅಧ್ಯಕ್ಷ ಪಟ್ಟಕ್ಕೆ ಮಹತ್ವದ ಹೆಸರು...
ಯುಪಿಎ ಬಣದ ಅಧ್ಯಕ್ಷ ಸ್ಥಾನದಿಂದ ಸೋನಿಯಾ ಗಾಂಧಿ ನಿವೃತ್ತಿ ಬಯಸಿದ್ದು ಇದೀಗ ಈ ಸ್ಥಾನಕ್ಕೆ ಮಹತ್ವದ ಹೆಸರೊಂದು ಕೇಳಿ ಬಂದಿದೆ.
ಟೀಂ ಇಂಡಿಯಾಗೆ ಸಿಕ್ತು ಗುಡ್ ನ್ಯೂಸ್; ರೋಹಿತ್ ಫಿಟ್ನೆಸ್ ಪರೀಕ್ಷೆ ಪಾಸ್..!...
ಟೀಂ ಇಂಡಿಯಾ ಆರಂಭಿಕ ಬ್ಯಾಟ್ಸ್‌ಮನ್ ರೋಹಿತ್ ಶರ್ಮಾ ಫಿಟ್ನೆಸ್ ಪರೀಕ್ಷೆಯನ್ನು ಪಾಸ್ ಮಾಡುವಲ್ಲಿ ಯಶಸ್ವಿಯಾಗಿದ್ದಾರೆ. 13ನೇ ಆವೃತ್ತಿಯ ಐಪಿಎಲ್ ಟೂರ್ನಿಯ ವೇಳೆ ಸ್ನಾಯು ಸೆಳೆತಕ್ಕೆ ಒಳಗಾಗಿದ್ದ ರೋಹಿತ್ ಕೊನೆಗೂ ಬೆಂಗಳೂರಿನ ರಾಷ್ಟ್ರೀಯ ಕ್ರಿಕೆಟ್ ಅಕಡಮಿ(ಎನ್‌ಸಿಎ)ಯಲ್ಲಿ ಫಿಟ್ನೆಸ್ ಪರೀಕ್ಷೆ ಪಾಸ್ ಮಾಡುವಲ್ಲಿ ಯಶಸ್ವಿಯಾಗಿದ್ದಾರೆ.
ಹೊಸ ವರ್ಷಕ್ಕೂ ಮುನ್ನ ಸಂಜನಾಗೆ ನಿಟ್ಟುಸಿರು.. ಈ ಕಾರಣಕ್ಕೆ ಕೊನೆಗೂ ಸಿಕ್ತು ಜಾಮೀನು!...
ಸ್ಯಾಂಡಲ್ ವುಡ್ ಡ್ರಗ್ಸ್ ಪ್ರಕರಣ/ ನಟಿ ಸಂಜನಾಗೆ ಷರತ್ತುಬದ್ಧ ಜಾಮೀನು/ ಬಂಧನವಾಗಿ 85 ದಿನಗಳ ಬಳಿಕ ಜಾಮೀನು/ ಅನಾರೋಗ್ಯಕ್ಕೆ ಚಿಕಿತ್ಸೆ ಪಡೆಯಬೇಕು ಎಂದು ಅರ್ಜಿ ಸಲ್ಲಿಸಿದ್ದರು
'ಕೈ'ಗೆ ಬಲ: ಡಿಕೆಶಿ, ಜಾರಕಿಹೊಳಿ ಸಮ್ಮುಖದಲ್ಲಿ ಹಲವು ನಾಯಕರು ಕಾಂಗ್ರೆಸ್ ಸೇರ್ಪಡೆ...
ಬೆಳಗಾವಿ ಲೋಕಸಭಾ ಉಪಚುನಾವಣೆಗೆ ಕಾಂಗ್ರೆಸ್ ಭರ್ಜರಿ ಸಿದ್ಧತೆ ನಡೆಸಿದ್ದು, ಜಾರಕಿಹೊಳಿ ಸಮ್ಮುಖದಲ್ಲಿ ಆಪರೇಷನ್ ಹಸ್ತ ಶುರು ಮಾಡಿದೆ.
ಜಾಗತಿಕ ಬಿಡುಗಡೆ ಸಿದ್ಧವಾದ Mi Watch Lite: ಇದು ಬಜೆಟ್ ಫ್ರೆಂಡ್ಲೀ...
ಚೀನಾ ಮೂಲದ ಶಿಯೋಮಿ ತನ್ನ ಎಂಐ ವಾಚ್ ಲೈಟ್ ಸ್ಮಾರ್ಟ್ ವೀಯರೇಬಲ್ ಸಾಧನದ ಜಾಗತಿಕ ಬಿಡುಗಡೆಯನ್ನು ಘೋಷಿಸಿದೆ. ಈ ಸ್ಮಾರ್ಟ್ ವಾಚ್‌ನ ಬೆಲೆ ಎಷ್ಟಿದೆ ಎಂಬುದು ನಿಖವಾಗಿ ಗೊತ್ತಿಲ್ಲವಾದರೂ, ಕೈಗೆಟುಕುವ ದರದಲ್ಲಿ ಲಭ್ಯವಾಗಲಿದೆ.
ಚೀನಾ ಕಾರು ಖರೀದಿಸಿದ ಸಿಎಂ BSY ಕಾರ್ಯದರ್ಶಿ ರೇಣುಕಾಚಾರ್ಯ!...
ವೋಕಲ್ ಫಾರ್ ಲೋಕಲ್ ಅನ್ನೋ ಮೋದಿ ಘೋಷವಾಕ್ಯಗಳು ಸ್ವತಃ ಬಿಜೆಪಿಗರೇ ಪಾಲಿಸುತ್ತಿಲ್ಲ. ಇದೀಗ ಮುಖ್ಯಮಂತ್ರಿ ಬಿಎಸ್ ಯಡಿಯೂರಪ್ಪ ಆಪ್ತ ಕಾರ್ಯದರ್ಶಿ ರೇಣುಕಾಚಾರ್ಯ, ಮೋದಿ ಪರಿಕಲ್ಪನೆಗಳನ್ನು ಗಾಳಿಗೆ ತೂರಿ ಚೀನಾ ಕಾರು ಖರೀದಿಸಿದ್ದಾರೆ.
ನಾಸಾ ಚಂದ್ರಯಾನ ತಂಡದಲ್ಲಿ ಜೆಸ್ಸಿಕಾ, ಚಂದ್ರನ ಮೇಲೆ ಕಾಲಿಡೋ ಮೊದಲ ಮಹಿಳೆ...
2024ರಲ್ಲಿ ನಾಸಾ ಕೈಗೊಳ್ಳುತ್ತಿರುವ ಚಂದ್ರನ ಮೇಲಿಡುವ ಯೋಜನೆಗೆ ಬಾಹ್ಯಾಕಾಶ ಯಾನಿ ಜೆಸ್ಸಿಕಾ ಮೇರ್ ಆಯ್ಕೆ. ಚಂದ್ರನ ಮೇಲೆ ಕಾಲಿಡುತ್ತಿರುವ ವಿಶ್ವದ ಮೊದಲ ಮಹಿಳೆ. ಕೀನ್ಯಾದಲ್ಲಿ ಮಗಳೊಂದಿಗೆ 58 ವರ್ಷದ ಅಮ್ಮನಿಗೂ ಡಾಕ್ಟರೇಟ್ ಪದವಿ. ಸಾಧನೆಗೆ ಎಲ್ಲರ ಶಹಬ್ಬಾಸ್ ಗಿರಿ.
Read Exclusive COVID-19 Coronavirus News updates, from Karnataka, India and World at Asianet News Kannada.
ವರ್ಚುಯಲ್ ಬೋಟ್ ರೇಸಿಂಗ್ ಗೇಮ್ ಆಡಿ ಮತ್ತು ನಿಮಗೆ ನೀವೇ ಸವಾಲು ಹಾಕಿಕೊಳ್ಳಿ ಈಗಲೇ ಆಡಲು ಕ್ಲಿಕ್ಕಿಸಿ
Last Updated Dec 11, 2020, 5:16 PM IST