ಬೆಂಗಳೂರು (ಡಿ. 11)  ಕೊನೆಗೂ ನಟಿ ಸಂಜನಾಗೆ ಹೊಸ ವರ್ಷಕ್ಕೂ ಮುನ್ನ ಒಂದು ನಿಟ್ಟುಸಿರು ಸಿಕ್ಕಿದೆ.  ಸ್ಯಾಂಡಲ್ ವುಡ್ ಡ್ರಗ್  ಪ್ರಕರಣದಲ್ಲಿ ತಿಂಗಳುಗಳ ಕಾಲ ಜೈಲಿನಲ್ಲಿದ್ದ ನಟಿ ಸಂಜನಾ ಗಲ್ರಾನಿಗೆ ಕರ್ನಾಟಕ ಹೈಕೋರ್ಟ್ ಜಾಮೀನು ನೀಡಿದೆ. 

ನ್ಯಾ. ಶ್ರೀನಿವಾಸ್ ಹರೀಶ್ ಕುಮಾರ್ ಅವರ ಏಕಸದಸ್ಯ ಪೀಠದಿಂದ ಆದೇಶ ನೀಡಿದ್ದು 3 ಲಕ್ಷ ಮೊತ್ತಕ್ಕೆ ಭದ್ರತಾ ಠೇವಣಿ ಹಾಗೂ ಇಬ್ಬರ ಶ್ಯೂರಿಟಿ ನೀಡಲು ತಿಳಿಸಿದ್ದು ಷರತ್ತು  ಬದ್ಧ ಜಾಮೀನು ನೀಡಿದೆ. ತಿಂಗಳಿಗೆ ಎರಡು ಬಾರಿ ತನಿಖಾಧಿಕಾರಿಗಳ ಎದುರು ಹಾಜರಾಗಬೇಕು.  ತನಿಖೆಗೆ ಸಹಕರಿಸಬೇಕು, ಸಾಕ್ಷ್ಯ ನಾಶಪಡಿಸದಿರುವಂತೆ  ತಿಳಿಸಲಾಗಿದೆ. ಬಂಧನಕ್ಕೆ ಒಳಗಾದ 85 ದಿನಗಳ ಬಳಿಕ ಜಾಮೀನು ಪಡೆದುಕೊಂಡಿದ್ದಾರೆ.

ಜೈಲಿನಲ್ಲೇ ಸಂಜನಾ ಕಿರಿಕ್.. ಅಧಿಕಾರಿಗಳಿಗೆ ದಿಕ್ಕೇ ತೋಚಲಿಲ್ಲ

ಇನ್ನೊಬ್ಬ ನಟಿ ರಾಗಿಣಿ ಜಾಮೀನಿಗಾಗಿ ಸುಪ್ರೀಂ ಕೋರ್ಟ್ ಮೊರೆ ಹೋಗಿದ್ದರೂ ಸಫಲತೆ ಸಿಕ್ಕಿಲ್ಲ. ಅನಾರೋಗ್ಯದ ಕಾರಣ ಸಂಜನಾ ನಾಮೀನು ಅರ್ಜಿ ಸಲ್ಲಿಸಿದ್ದರು.

ಸಂಜನಾ ಗಲ್ರಾನಿ ಅಸ್ತಮಾ ಹಾಗೂ ಉಸಿರಾಟದ ತೊಂದರೆಯಿಂದ ಬಳಲುತ್ತಿದ್ದಾರೆ.. ಚಳಿಗಾಲದಲ್ಲಿ ಇದು ಉಲ್ಬಣವಾಗುವ ಸಾಧ್ಯತೆ ಹೆಚ್ಚಿದೆ. ಹಿಂದೊಮ್ಮೆ ಶಸ್ತ್ರ ಚಿಕಿತ್ಸೆಗೂ ಒಳಗಾಗಿದ್ದರು ಎಂಬುದನ್ನು ಸಂಜನಾ ಪರ ವಕೀಲರು  ಉಲ್ಲೇಖ ಮಾಡಿದ್ದರು.